ಭವಿಷ್ಯ ನಿಧಿ ಪಿಂಚಣಿ-ಅಂಚೆ ಇಲಾಖೆಯ ಮೂಲಕ ಮನೆ ಬಾಗಿಲಿಗೆ ಜೀವನ ಪ್ರಮಾಣ ಪತ್ರ ಸೇವೆ

0
169

ಕಲಬುರಗಿ: ಭವಿಷ್ಯ ನಿಧಿ ಪಿಂಚಣಿದಾರರು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಪಿಂಚಣಿದಾರರು ಭವಿಷ್ಯ ನಿಧಿ ಕಛೇರಿಗೆ ಹಾಗೂ ಬ್ಯಾಂಕುಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲ.

ಈ ಸೇವೆಯನ್ನು ಪಡೆಯಲು ಪಿಂಚಣಿದಾರರು ತಮಗೆ ಹತ್ತಿರದ ಅಂಚೆ‌ ಕಛೇರಿಗೆ ಭೇಟಿ ನೀಡಿ ಜೀವನ ಪ್ರಮಾಣ ‌ ಪತ್ರವನ್ನು ಸಲ್ಲಿಸಬಹುದು. ಇನ್ನು ಮುಂದೆ ಮನೆ ಬಾಗಿಲಿಗೆ ಟಪಾಲು ತರುವ ಪೋಸ್ಟ್ ಮ್ಯಾನ ಕೂಡ ಭವಿಷ್ಯ ನಿಧಿ ಪಿಂಚಣಿದಾರರ ಆಧಾರ ಆಧಾರಿತ ಬಯೋಮೆಟ್ರಿಕ್ ಡಿಜಿಟಲ್ ಜೀವನ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ ಎಂದು ಕಲಬುರಗಿ ಕಛೇರಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪಿಂಚಣಿದಾರರು ತಪ್ಪದೇ ತಮ್ಮ ಆಧಾರ ಸಂಖ್ಯೆ, ಬ್ಯಾಂಕ್ ಅಕೌಂಟ್ ನಂಬರ, ಪಿ.ಪಿ.ಓ ನಂಬರ ಹಾಗೂ ಮೊಬೈಲ್ ನಂಬರ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಕಛೇರಿಯ ಸಹಾಯವಾಣಿ 08472-273204 & 273205 ಸಂಪರ್ಕಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here