ಶಹಾಬಾದ: ಮಾಲಗತ್ತಿ ಗ್ರಾಮವನ್ನು ಶಹಾಬಾದ ತಾಲೂಕಿಗೆ ಸೇರಿಸಬೇಕೆಂದು ಮಾಲಗತ್ತಿ ಗ್ರಾಮಸ್ಥರು ಶನಿವಾರ ಚಿತ್ತಾಪೂರ ತಹಸೀಲ್ದಾರ ಉಮಾಕಾಂತ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಾಲಗತ್ತಿ ಗ್ರಾಮದ ಜನರು ಪ್ರತಿಯೊಂದು ಕಾರ್ಯಗಳಿಗೆ ಶಹಾಬಾದ ನಗರಕ್ಕೆ ಹೋಗಿ ಬರುತ್ತಾರೆ.ಈ ಹಿಂದೆ ಚಿತ್ತಾಪೂರ ತಾಲೂಕಿಗೆ ಒಳ್ಳಪಟ್ಟಿದ್ದರೂ, ಗ್ರಾಮದ ಜನರು ಶಹಾಬಾದ ನಗರದ ಮೇಲೆ ಅವಲಂಬನೆಯಾಗಿದ್ದರು. ಸಂತೆ, ಆಸ್ಪತ್ರೆ, ಶಿಕ್ಷಣ ಪಡೆಯಲು ಜನರು ಶಹಾಬಾದ ನಗರಕ್ಕೆ ಹೋಗುತ್ತಾರೆ ವಿನಃ ಚಿತ್ತಾಪೂರಕ್ಕೆ ಹೋಗುವುದಿಲ್ಲ.ಕಾರಣ ಚಿತ್ತಾಪೂರ ನಗರ ಮಾಲಗತ್ತಿಯಿಂದ ಸುಮಾರು ಸುಮಾರು 15 ಕಿಮೀ ದೂರದಲ್ಲಿದೆ.ಆದರೆ ಶಹಾಬಾದ ನಗರ ಕೇವಲ ಐದು ಕಿಮೀ ಸಮೀಪದಲ್ಲಿದೆ.ಆದ್ದರಿಂದ ನಮ್ಮ ಮಾಲಗತ್ತಿ ಗ್ರಾಮವನ್ನು ಚಿತ್ತಾಪೂರಕ್ಕೆ ಸೇರಿಸದೇ, ಶಹಾಬಾದ ತಾಲೂಕಿಗೆ ಸೇರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಇಟಗಿ, ಶರಣಪ್ಪ ಸಣಮೋ, ದೇವಪ್ಪ ಸಣಮೋ, ದೇವಪ್ಪ ಕುಲಕುಂದಿ, ರವಿ ಯರಗೋಳ, ಈಶ್ವರ ಮುಗುಳನಾಗಾವ, ಸಿದ್ದು ಅಲ್ಲೂರ ಸೇರಿದಂತೆ ಅನೇಕರು ಹಾಜರಿದ್ದರು.