ಕಲಬುರಗಿ: ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಯುವ ಸಾಹಿತಿ ಹಾಗೂ ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೋಗಿ ಅವರ “ಚಿಗುರು” ಕೃತಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆಯವರು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳೆಂದು ಎಲ್ಲ ಕಾಲಕ್ಕೂ ಒಪ್ಪಿಕೊಂಡಿದ್ದರೂ ಕೂಡಾ ಅಸಮಾನತೆ ಎದ್ದು ಕಾಣುತ್ತದೆ.ಜೈನ್ ಸಾಹಿತ್ಯದಲ್ಲಿ ಪಂಪ ಅಹಿಂಸಾ ತತ್ವವನ್ನು ಪ್ರಸ್ತಾಪಿಸುತ್ತಾ ” ಮನುಷ್ಯ ಜಾತಿ ತಾನೋಂದೆ ವಲಂ” ಎಂಬುದನ್ನು ಸಾರಿದ ಸಂದೇಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುತ್ತಾ ಇವತ್ತಿನ ಯುವ ಬರಹಗಾರರು ಸಾಮಾಜಿಕ ಸ್ವಾಸ್ಥ್ಯ ವನ್ನು ಗಟ್ಟಿಗೊಳಿಸುವ ಕೃತಿಗಳನ್ನು ರಚಿಸಿಬೇಕೆಂದು ಕರೆ ನೀಡಿದರು.
ಚಿಗುರು ಕೃತಿ ಕುರಿತು ಮಾತನಾಡಿದ ಕಾವ್ಯಶ್ರೀ ಮಹಾಗಾಂವಕರ , ಡಾ.ನಾಗಪ್ಪ ಗೋಗಿಯವರು ಬೆಳೆದು ಬಂದ ಪರಿಸರ,ತಂದೆ ,ತಾಯಿ,ಬಂಧು ಬಳಗ,ದೇಶ ಪ್ರೇಮ, ನೆಲ,ಜಲ ಹಾಗೂ ಈ ಭಾಗದ ಸಾಂಸ್ಕೃತಿಕ ಸಂದೇಶಗಳನ್ನು ಸಾರುವ ಹಲವಾರು ಕವಿತೆಗಳು ಈ ಕೃತಿ ಒಳಗೊಂಡಿದ್ದು, ಇಂದಿನ ಯುವ ಬರಹಗಾರರಲ್ಲಿ ಇರಬೇಕಾದ ಕಾವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ, ಇವರ ಕೃತಿಯು ಕವಿಯ ಬದುಕಿನ ಮುಖಪುಟವನ್ನು ಹೋಲುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಾಹಿತಿ ಬಿ.ಎಚ್.ನಿರಗುಡಿ ಯವರು ಮಾತನಾಡಿ ಡಾ.ನಾಗಪ್ಪ ಗೋಗಿಯವರು ಇನ್ನೂ ಹತ್ತು ಹಲವಾರು ಕೃತಿಗಳು ರಚಿಸಲಿ ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದಲ್ಲಿ 2020 ನೇ ಸಾಲಿನ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ.ಎನ್ ಅಕ್ಕಿಯವರು ಕೃತಿಯನ್ನು ಬಿಡುಗಡೆ ಮಾಡಿದರು ಪ್ರಕಾಶನ ಹಾಗೂ ಸತ್ಯಂ ಪಿಯು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು, ಹಾಗೂ ಸಗರ ನಾಡಿನ ಲೇಖಕರ ಸಂಘ,ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇವರನ್ನು ಸನ್ಮಾನಿಸಿದರು.
ಸ್ವಾಗತ ಹಾಗೂ ಪ್ರಾಸಾವಿಕವಾಗಿ ಡಾ.ನಾಗಪ್ಪ ಗೋಗಿ ಮಾತನಾಡಿದರು, ಶ್ರೀನಿವಾಸ ನಾಲವಾರ ನಿರೂಪಿಸಿದರು, ಬಸವಾರಾಜ ಶೃಂಗೇರಿ ಪ್ರಾರ್ಥನೆ ಹಾಡಿದರು. ಜಿ.ಜಿ. ವಣಕಿಹಾಳ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಕಲ್ಯಾಣರಾವ್ ಪಾಟೀಲ್,ಡಾ ನಾರಾಯಣ ರೋಲೆಕರ, ಶ್ರೀನಿವಾಸ ಸಿರನೂರಕರ್, ಡಾ.ಚಿ.ಸಿ.ನಿಂಗಣ್ಣ ,ಡಾ.ಸುರೇಶ ಜಾಧವ,ಶ್ರೀ ವೆಂಕಟೇಶ ನೀರಡಗಿ, ಡಾ.ಸೂರ್ಯಕಾಂತ ಸುಜ್ಯಾತ, ಡಾ. ಬಸವಂತರಾಯ್ ಜಾವಳಿ, ಡಾ.ಗವಿಸಿದ್ದಪ್ಪ ಪಾಟೀಲ್, ಪ.ಮನುಸಾಗರ, ವೆಂಕಟೇಶ ನಿರಡಗಿ, ಗಣೇಶ ಚಿನ್ನಾಕಾರ, ಸುಬಾಸ್ ಬಾದಾಮಿ, ಸುಬಾಸ ಹಾಬಾಳಕರ್, ಚಾಮರಾಜ ದೊಡಮನಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಪ್ರಾದ್ಯಾಪಕರು, ಹಾಗೂ ಅನೇಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.