ಬರಹ ಲೋಕಕ್ಕೆ ಬೆಳಗೆರೆ ಕೊಡುಗೆ ಅಪಾರ: ಶಾಂತಪ್ಪ ಬೂದಿಹಾಳ

0
117

ಸುರಪುರ: ಕನ್ನಡ ನಾಡಿನ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕಕ್ಕೆ ರವಿ ಬೆಳಗೆರೆಯವರ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಹಾಗು ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಹೇಳಿದರು.

ರಂಗಂಪೇಟೆ ಶ್ರೀ ಬಸವೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಶರಣ ಸೇವಾ ಸಂಸ್ಥೆವತಿಯಿಂದ ಆಯೋಜಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಶಾಂತಪ್ಪ ಬೂದಿಹಾಳರವರು ರವಿಬೆಳೆಗೆರೆ ಪತ್ರಿಕಾ ಲೋಕದ ವಿಶೇಷ ಬರಹಗಾರರಾಗಿ ಗುರುತಿಸಿಕೊಂಡು ಕಳೆದ ಎರಡು ದಶಕದ ಅವಧಿಯಲ್ಲಿ ಅನೇಕ ಜನ ಹೊಸ ಓದುಗರನ್ನು ಸೃಷ್ಠಿಸಿದ ಕೀರ್ತಿ ಬೆಳೆಗೆರೆಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ ಕೀರ್ತಿ ರವಿ ಬೆಳೆಗೆರಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಡೋಣೂರು ಮಾತನಾಡಿ ಪತ್ರಿಕಾ ಲೋಕಕ್ಕೆ ಮತ್ತು ಅನೇಕ ಯುವ ಬರಹಗಾರರಿಗೆ ಸ್ಪೂರ್ತಿದಾಯಕರಾದ ರವಿ ಬೆಳೆಗೆರೆಯವರು ನಮ್ಮನ್ನು ಅಗಲಿದ್ದು ಈ ಕನ್ನಡ ನಾಡಿಗೆ ಅಪಾರವಾದ ನಷ್ಟವನ್ನು ಹೊಂದಿದಂತಾಗಿದೆ ಎಂದು ಹೇಳಿದರು.

ಶ್ರೀ ಶರಣ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶಿವರಾಜ ಕಲಕೇರಿಯವರು ಮಾತನಾಡಿ ಇವರು ಬರೆದ ಅನೇಕ ಕಾದಂಬರಿಗಳು ಮತ್ತು ಹಾಯ್ ಬೆಂಗಳೂರು ಎಂಬ ಪತ್ರಿಕೆ ಮೂಲಕ ಈ ನಾಡಿಗೆ ಓದುಗರನ್ನ ಹೆಚ್ಚಿಸುವಂತ ಶಕ್ತಿ ರವಿಬೆಳೆಗೆರೆಯವರು ಆಗಿದ್ದರು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ರವಿಗೌಡ ಹೇಮನೂರು, ವೀರಭದ್ರಪ್ಪ ಕುಂಬಾರ, ಅಂಬ್ರೇಶ ಕುಂಬಾರ, ಮಲ್ಲು ಬಾದ್ಯಾಪೂರ, ವೀರೇಶ ಹಳಿಮನಿ, ಅಂಬ್ರೇಶ ಪರತಾಬಾದ ಇದ್ದರು. ಪ್ರವೀಣ ಜಕಾತಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here