ಸುರಪುರ: ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಯಾದಗಿರಿ ಹಾಗೂ ಜಾನಪದ ಕಲಾಲೋಕ ರಂಗಂಪೇಟ ಸಹಯೋಗದೊಂದಿಗೆ ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ನವೆಂಬರ್ ೧೪ ರ ಸಂಜೆ ಜಾನಪದ ರಾಜ್ಯೋತ್ಸವ ಹಾಗೂ ಜಾನಪದ ಕಲಾವಿಧರಿಂದ ಜಾನಪದ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಕಾ ಪ್ರಕಟಣೆ ನೀಡಿರುವ ಅವರು ಸಂಜೆ ೪:೦೦ ಗಂಟೆಗೆ ಆಯೋಜಿಸಿರುವ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ನಾಗನಟಗಿ ವೀರಭದ್ರೆಶ್ವರ ಹಿರೇಮಠದ ಪೂಜ್ಯಶ್ರೀ ಸಿದ್ರಾಮಯ್ಯ ಸ್ವಾಮಿಗಳು ವಹಿಸಲಿದ್ದು, ಕಾರ್ಯಕ್ರವನ್ನುಸುರಪುರ ನಗರಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಜ ಸೂಗುರೇಶ ವಾರದ ಉದ್ಘಾಟಿಸುವರು, ಉಪನ್ಯಾಸಕ ವೀರೆಶ ಹಳಿಮನಿ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿ ಪುರಸ್ಕೃತ ಕಲಾವಿಧರುಗಳಾದ ಲಕ್ಷ್ಮಣ ಗುತ್ತೆದಾರ ಸುರಪುರ, ಶಿವಪ್ಪ ಹೆಬ್ಬಾಳ ಕೋಡೆಕಲ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಲಾವಿಧ ಚಂದ್ರಾಸ ಮಿಟ್ಟ ಲಕ್ಷ್ಮೀಪುರ ಪಾಲ್ಗೊಳ್ಳುವರು ಹಾಗೂ ಅತಿಥಿಗಳಾಗಿ ಸರ್ವಜ್ಞ ಸಂಸ್ಥೆಯ ಅಧ್ಯಕ್ಷ ಅಂಬ್ರೇಶ ಕುಂಬಾರ, ಶ್ರೀಗುರು ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ, ವಾಲ್ಮಿಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಶಾಂತು ನಾಯಕ, ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಿಕೇರಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಜನಪದ ಸಂಭ್ರಮ ಕಾರ್ಯಕ್ರಮ ಆಯೋಜಿಸಿದ್ದು ಕಲಾವಿಧರುಗಳಾದ ಸಿದ್ದರೋಡ ಗವಾಯಿ ನಾಗರಹಳ್ಳಿ ತಂಡದವರಿಂದ ರಿವಾಯಿತ್ ಪದಗಳು, ಬಸಪ್ಪ ಹಣಮಸಾಗರ ಮತ್ತು ತಂಡದವರಿಂದ ಡೊಳ್ಳಿನ ಪದಗಳು, ಶಿವಪ್ಪ ಹೆಬ್ಬಾಳ ತಂಡದವರಿಂದ ಭಜನಾ ಪದಗಳು, ಬಸವರಾಜ ಹೆಳಸಂಗಿ ಅವರಿಂದ ತತ್ವಪದಗಳು, ನಿಲಪ್ಪ ಚೌದ್ರಿ ಮತ್ತು ತಂಡದವರಿಂದ ಜನಪದಗೀತೆ, . ವೀರಸಂಗಮ್ಮ ದಾನಪ್ಪ ಅಪ್ಪಾಗೋಳ್ ತಂಡದವರಿಂದ ಗೀಗಿ ಪದ ಕಾರ್ಯಕ್ರಮ ನಡೆಯುವದು ಎಂದು ಅಂಗಡಿ ತಿಳಿಸಿದ್ದಾರೆ.