ಕೆಲಸಕ್ಕೆ ಬಾರದ ಸರ್ಕಾರದಿಂದ ಗ್ರಾಮ ವಾಸ್ತವ್ಯದ ನಾಟಕ: ಯಡಿಯೂರಪ್ಪ ವ್ಯಂಗ್ಯ

0
68
  • ಬಸವರಾಜ ಸಿನ್ನೂರ.

ಶಹಾಪುರ: ಸಮ್ಮಿಶ್ರ ಸರಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಇದು ಕೆಲಸಕ್ಕೆ ಬಾರದ ಸರಕಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗ ಬಿ.ಎಸ್. ಯಡಿಯೂರಪ್ಪ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಅನವಾರ ಗ್ರಾಮಕ್ಕೆ ಬರ ವೀಕ್ಷಣೆಗೆ ಆಗಮಿಸಿದ ಯಡಿಯೂರಪ್ಪ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಒಂದು ವರ್ಷ ಕಳೆದರೂ ಇಷ್ಟು ದಿನ ಯಾಕೆ ಸುಮ್ಮನೆ ಕುಳಿತಿದ್ದರು ಸೋಲಿನ ಭೀತಿಯಿಂದ  ಕಂಗೆಟ್ಟು ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಚಂದ್ರಶೇಖರಗೌಡ ಮಾಗನೂರು,ಗುಲ್ಬರ್ಗ ವಿಧಾನ ಪರಿಷತ್ತಿನ ಸದಸ್ಯರಾದ ಬಿ.ಜಿ. ಪಾಟೀಲ್ , ರಾಯಚೂರು ಲೋಕಸಭಾ ಸಂಸದರಾದ ಅಮರೇಶ್ ನಾಯಕ್, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ಬಿಜೆಪಿಯ ಹಿರಿಯ ಮುಖಂಡರಾದ ಡಾ॥ ಚಂದ್ರಶೇಖರ್ ಸುಬೇದಾರ, ದೇವರಾಜ್ ನಾಯಕ್, ಹಾಗೂ ಸಂಗನಗೌಡ ಪಾಟೀಲ್  ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here