ಭಾಲ್ಕಿ: ಕಡ್ಡಾಯ ಕನ್ನಡದಲ್ಲಿ ನಾಮಫಲಕ ಹಾಕಿ ಇಲ್ಲ ಅಂದರೆ ಅನ್ಯ ಭಾಷೆಯ ನಾಮಫಲಕಕ್ಕೇ ಕಪ್ಪು ಮಷಿ ಬಡೆಯುವ ಕಾರ್ಯಕ್ರಮ ನಾಳೆಯಿಂದ ಕರವೇ ಭಾಲ್ಕಿ ಘಟಕ ಹಮ್ಮಿಕೊಂಡಿದೆ ಎಂದು ತಿಳಿಸಿದೆ.
ತಾಲ್ಲೂಕು ಅಡಳಿತದಿಂದ ಮಿನಿ ವಿಧಾನಸಭೆಯಲ್ಲಿ ತಹಶೀಲ್ದಾರ್ ಅಣ್ಣಾರಾವ ಪಾಟೀಲ ರವರ ಆಧ್ಯಕ್ಷತೆಯಲ್ಲಿ ಅಧಿಕರಿಗಳು ಹಾಗೂ ಸರಾಫಿ, ಕಪಡ, ಕಿರಾಣಿ ಬಜಾರ, ಜನರಲ ಸ್ಟ್ಟೋರ್, ಸವಿತ ಸಮಾಜ, ಭಾoಡೆ ಬಜಾರ, ಬೇಕರಿ, ಅಡತ್ ಸೇರಿದಂತೆ ಹಲವು ಅಸೋಶಿಯೆಷನ್ ಅಧ್ಯಕ್ಷರ ಸಭೆ ಜರುಗಿತು.
ಈ ಸಭೆಯಲ್ಲಿ DSP ಡಾ.ದೇವರಾಜ್, ತಾಲೂಕ ಪಂಚಾಯತ್ ಕಾರ್ಯಾ ನಿರ್ವಾಹಕ ಅಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿ, ಕಾರ್ಮಿಕ ಅಧಿಕಾರಿ ಸೇರಿದಂತೆ ಕರವೇ ಸಂಘಟನೆ ಗಣೇಶ ಪಾಟೀಲ ಇದ್ದರು.