ಕಲಬುರಗಿ: ಬಹಳ ವರ್ಷದಿಂದ ಗೈರಾಣು ಜಮೀನು ಒಂದನ್ನು ಅತಿಕ್ರಮಿಸಿರುವ ಕುರಿತು ತಹಸೀಲ್ದಾರಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗುಂಪು ಒಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೇಡಂ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಊಡಗಿ ಗ್ರಾಮದ ಖಾಸಿಂ ಸಾಬ ಹಲ್ಲೆಗೆ ಒಳಗಾದ ವ್ಯಕ್ತಿ .ಗ್ರಾಮದ ಗೈರಾಣು ಜಮೀನಿನ ಅಕ್ಕ ಪಕ್ಕದ ಜಮೀನಿನವರು ಅತಿಕ್ರಮಿಸಿ ಕೃಷಿ ನಡೆಸುತ್ತಿರುವ ಕುರಿತು ಸುಮಾರು ನಾಲ್ಕು ವರ್ಷಗಳಿಂದ ತಾಲ್ಲೂಕು ಅಧಿಕಾರಿಗಳಿಗೆ ದೂರು ನೀಡುತ್ತ ಬಂದಿದರೂ ಯಾವುದೇ ಪ್ರಯೋಜನ ವಾಗುತ್ತಿಲ್ಲ ಎಂದು ಖಾಸಿಂ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೀಗ ಮತ್ತೆ ಮನವಿ ನೀಡಿದ್ದರ ಪರಿಣಾಮ ಸರ್ವೆ
ಕಾರ್ಯಕ್ಕಾಗಿ ತಹಸೀಲ್ ಕಾರ್ಯಾಲಯದ ಸಿಬ್ಬಂದಿ
ಗ್ರಾಮಕ್ಕೆ ಆಗಮಿಸಿ ನನ್ನ ಬಳಿ ಮಾತನಾಡುತ್ತಿರುವಾಗ ಏಕಾಏಕಿ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆಮಾಡಲಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಿನ್ನ ಜಮೀನು ಏನು ನಾವು ಬಳಸುತ್ತಿಲ್ಲ ಅದನ್ನೂ ಬಿಟ್ಟು ಕೊಡುವುದಿಲ್ಲ ಮಾಜಿ ಸಚಿವ ಡಾ.ಶರಣಪ್ರಕಾಶ ಹಾಗೂ ಅವರ ಸಹೋದರ ಬಸವರಾಜ ಪಾಟೀಲ ನನ್ನ ಜೋತೆಗಿದ್ದಾರೆ ಎಂದು ಹಲ್ಲೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯ ತಯ್ಯಬ ಪಟೇಲ ಹೇಳಿದ್ದು ನನ್ನನ್ನು ಕೋಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಹಲ್ಲೆ ಮಾಡಲು ತಮ್ಮ ಸಹೋದರರಾದ ಜಮೀರ ಪಟೇಲ್, ತಾಹೇರ ಪಟೇಲ್, ಸುಲೆಮಾನ ಸಾತ್ ನೀಡಿದ್ದು, ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿಗಳು ಬೆಲ್ ಪಡೆದಿದ್ದಾರೆ. ತಹಸೀಲ್ದಾರರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಕೂಡಲೇ ಗೈರಾಣ ಜಮೀನನ್ನು ವಶಕ್ಕೆ ಮಡೆದುಕೊಳ್ಳಬೇಕು ಇಲ್ಲದಿದ್ದರೆ ಮೇಲಾಧಿಕಾರಿಗಳಿಗೆ ಅಧಿಕಾರಿಗಳ ವಿರುದ್ಧ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ನಾಗರಾಜ ಮಾಲಿಪಾಟೀಲ, ಮಹಾಂತೇಶ ಕಂಬಾರ, ಗೌಸ್ ಪಟೇಲ್, ಫಾರೂಕ್ ಸೇರಿದಂತೆ ಇದ್ದರು.