ಕಲಬುರಗಿ: ನಗರ ವ್ಯಪ್ತಿಯಲ್ಲಿ ನಡೆದ ಮೂರು ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಮನೆಗಳ್ಳನನ್ನು ವಿವಿಧ ಠಾಣೆಯ ಪೊಲೀಸ್ ಸಿಬ್ಬಂಧಿಗಳ ನೇತೃತ್ವದಲ್ಲಿ ಚೌಕ್ ಪೊಲೀಸರು ಕಾರ್ಯಾಚರಣೆ ನಡೆಸಿ 8.3 ಲಕ್ಷ ಮೌಲ್ಯದ ಆಭರಣ ಜಪ್ತಿ ಮಾಡಿಕೊಂಡಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಚೌಕ್ ಪೊಲೀಸ್ ಠಾಣೆಯ ಪಿ.ಎಸ್.ಐ ಎಸ್.ಆರ್.ನಾಯ್ಕೆ ಪೊಲೀಸ್ ನೇತೃತ್ವದ ಎಂ.ಬಿ ನಗರ ಪೊಲೀಸ್ ಠಾಣೆಯ ಬಂದೇನವಾಜ, ಬ್ರಹ್ಮಪುರ ಪೊಲೀಸ್ ಠಾಣೆಯ ಭೀಮಾನಾಯಕ, ರಾಘವೇಂದ್ರ ಪೊಲೀಸ್ ಠಾಣೆಯ ರಮೇಶ, ವಿಶ್ವ ವಿದ್ಯಾಲಯದ ಪ್ರಭಾಕರ್ ಸಿಬ್ಬಂಧಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ನಿನ್ನೆ ಹುಮನಾಬಾದ ರಿಂಗ್ ರೋಡ ಹತ್ತಿರ ದಾಳಿ ನಡೆಸಿದ ಪೊಲೀಸರು ಬಾಪು ನಗರ ನಿವಾಸಿ ಸುಮನ್ ಭಾರತ ಉಪಾಧ್ಯ (31) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಚೌಕ್, ಬ್ರಹ್ಮಪೂರ ಹಾಗೂ ಸ್ಟೇಷನ್ ಬಜಾರ ಪೊಲೀಸ್ ಠಾಣೆಯ ವ್ಯಾಪ್ತಿಯ ತಲಾ ಒಂದು ಒಂದು ಸೇರಿಸಿ ಒಟ್ಟು ಮೂರು ಪ್ರಕರಣಗಳಲ್ಲಿನ ಓಟ 8 ಲಕ್ಷ 30 ಸಾವಿರ ಮೌಲ್ಯದ ಬೆಲೆ ಬಾಳುವ 166 ಗ್ರಾಂ ಚಿನ್ನದ ಆಭರಣಗಳು ಜಪ್ತಿ ಮಾಡಿಕೊಂಡು ಆರೋಪಿಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.