ಬೆಂಗಳೂರು: ರಾಜ್ಯಾದ್ಯಂತ ಒಟ್ಟು 80 ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗುತ್ತಿರುವ “ಆಕ್ಟ್-1978” ಲಾಕ್ ಡೌನ್ ನಂತರ ಮೊದಲ ಕನ್ನಡ ಚಲನ ಚಿತ್ರ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ.
ACT1978, ಜನಸಾಮಾನ್ಯರಿಗೆ ತಿಳಿದಿರಬೇಕಾದ ಕಾನೂನಿನ ಬಹುಮುಖ್ಯವಾದ ವಿಷಯಗಳನ್ನು ಪರದೆಯಯ ಮೂಲಕ ತಲುಪಿಸಲು ಹೊಸ ಪ್ರಯತ್ನ ಇದಾಗಿದೆ ಎಂದು ಸಿನಿಮಾ ತಂಡ ತಿಳಿಸಿದ್ದು, ಹತ್ತಾರು ಜನರ ಕನಸು, ಸಾವಿರಾರು ಜನರ ಶ್ರಮ ಈ ಸಿನಿಮಾ ಹೊಂದಿದೆ ಎಂದು ನಿರ್ದೇಶಕ ಮನಸೋರೆ ತಿಳಿಸಿದ್ದಾರೆ.
ಸಿನಿಮಾದ ನಾಯಕಿಯಾಗಿ ಯಜ್ಞಾ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿದ್ದು, ನಿರ್ದೇಶಕ ಮನಸೋರೆ ಆಕ್ಷನ್ ಕಟ್ ಹೇಳಿದ್ದಾರೆ. “ಆಕ್ಟ್-1978” ಸಿನಿಮಾಗೆ ದೇವರಾಜ್ ನಿರ್ಮಾಪಕರಾಗಿದ್ದಾರೆ.
ಕೋಟ್ಯಾಂತರ ಜನ ನೇರವಾಗಿ ಮತ್ತು ಪರೋಕ್ಷವಾಗಿ ಅವಲಂಬಿತವಾಗಿರುವ ಉದ್ಯಮ ಸಿನೆಮಾ, ಅವರಿಗೆಲ್ಲಾ ಶಾಶ್ವತ, ತಾತ್ಕಾಲಿಕ/ಅರೆಕಾಲಿಕ ಉದ್ಯೋಗ ಕಲ್ಪಿಸಿರುವ ಉದ್ಯಮ ಸಿನೆಮಾ, ಸಿನೆಮಾ ಉದ್ಯಮ ಬೇಗ ಚೇತರಿಸಿಕೊಳ್ಳಲಿ, ಅಷ್ಟೂ ಜನರ ಬದುಕು ಮರಳಿ ಹಸನಾಗಲಿ ಎಂಬುದೂ “ಆಕ್ಟ್-1978 ಸಿನೆಮಾದ ಬಿಡುಗಡೆಯ ಹಿಂದಿನ ಆಶಯ ಎಂದಿದ್ದಾರೆ.
ಜಾತಿ, ಮತ, ಮೇಲು, ಕೀಳು ಎಂಬ ಬೇಧಭಾವಗಳಿಲ್ಲದೆ ಎಲ್ಲರೂ ಒಂದೆಡೆ ಸೇರುವ ಜಾಗಗಳಲ್ಲೊಂದು ಚಿತ್ರಮಂದಿರ, ಚಿತ್ರಮಂದಿರದೊಳಗೆ ಬಂದವರನ್ನು ತನ್ನತ್ತ ಕನೆಕ್ಟ್ ಮಾಡಿಕೊಳ್ಳುವ ಗುಣವಿರುವ “ಬೆಳ್ಳಿಪರದೆಯಲ್ಲಿ ಆಕ್ಟ್-1978 ಸಿನಿಮಾ ವಾಗಿದೆ ಎಂದು ತಂಡ ಆಶಯ ವ್ಯಕ್ತಪಡಿಸಿದೆ.