11 ಚಿನ್ನದ ಪದಕ ಪಡೆದ ಕನ್ನಡ ವಿಭಾಗದ ಜಯಶ್ರೀಗೆ ಅಧ್ಯಾಪಕಿಯಾಗುವ ಆಸೆ

0
490

ಕಲಬುರಗಿ: ನೆಟ್, ಸೆಟ್ ಉತ್ತೀರ್ಣಳಾಗುವ ಮೂಲಕ ಡಿಗ್ರಿ ಕಾಲೇಜು ಪ್ರೊಪೆಸರ್ ಆಗುವ ಆಸೆ ವ್ಯಕ್ತಪಡಿಸಿ ದವರು ಗುಲ್ಬರ್ಗ ವಿವಿಯ ೩೮ನೇ ಘಟಿಕೋತ್ಸವದಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಪದವಿ (ಶೇ. ೭೭) ಪಡೆದ ಜಯಶ್ರಿ ಶಿವಶರಣಪ್ಪ ಯಳಸಂಗಿ.

ಆಳಂದ ತಾಲ್ಲೂಕಿನ ಮಾಡ್ಯಾಳ ಗ್ರಾಮದ ಈ ವಿದ್ಯಾರ್ಥಿನಿ ಹೈಸ್ಕೂಲ್ ತಮ್ಮ ಸ್ವಗ್ರಾಮದಲ್ಲಿ ಮುಗಿಸಿದ್ದಾರೆ. ಪಿಯುಸಿ ಸರ್ಕಾರಿ ಕಾಲೇಜಿನಲ್ಲಿ ಎಚ್ಕೆಇ ಸಂಸ್ಥೆಯ ಆಳಂದ ಡಿಗ್ರಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾಳೆ.

Contact Your\'s Advertisement; 9902492681

ತಂದೆ ಶಿವಶರಣಪ್ಪ ಒಕ್ಕಲುತನ ಮಾಡುತ್ತಿದ್ದು, ತಾಯಿ ಶೋಭಾ ಗೃಹಿಣಿಯಾಗಿದ್ದಾರೆ. ಇವರಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರರು. ಎರಡನೆಯ ಮಗಳು ಜಯಶ್ರೀಯ ಈ ಸಾಧನೆಗೆ ತಂದೆ-ತಾಯಿ ಖುಷಿಯಾಗಿದ್ದಾರೆ.

ಕನ್ನಡ ವಿಭಾಗದ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಹಾಗೂ ಅತಿಥಿ ಪ್ರಾಧ್ಯಾಪಕರ ಪಾಠ ಪ್ರವಚನದಿಂದಾಗಿ ಈ ಸಾಧನೆ ಮಾಡಲಾಗಿದೆ ಎಂದು ಹೇಳುವ ಜಯಶ್ರೀ ಗ್ರಂಥಾಲಯದಲ್ಲಿ ಹೆಚ್ಚು ಕಾಲ ಕಳೆದಿದ್ದರಿಂದ ಈ ಗುರಿ ತಲುಪಲು ಸಾಧ್ಯವಾಗಿದೆ ಎನ್ನುತ್ತಾಳೆ.

ಹೆಚ್ಚಿನ ಅಂಕ ಬರುವ ನಿರೀಕ್ಷೆ ಇತ್ತು. ಆದರೆ ೧೧ ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ ಎಂದು ಮುಗ್ಧವಾಗಿ ನುಡಿಯುತ್ತಾಳೆ ಜಯಶ್ರೀ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here