ಶಹಾಬಾದ:ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ಶಾಸಕ ಖರ್ಗೆ ಅವರ ಅಭಿಮಾನಿ ಬಳಗದ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ನೀಡಿ, ಹಾಗೂ ಬಡವರಿಗೆ ಹೊದಿಕೆಗಳನ್ನು ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದರು.
ನಗರದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಲಾಯಿತು.ಅಲ್ಲದೇ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಬಿಕ್ಷಕ ಹಾಗೂ ನಿರಾಶ್ರಿತರಿಗೆ ಹೊದಿಕೆಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಕೊರೊನಾ ಹಾವಳಿ ಮತ್ತು ತಾಲೂಕಿನಲ್ಲಿ ಉಂಟಾದ ಪ್ರವಾಹದಿಂದ ಸಾಕಷ್ಟು ಜನರಿಗೆ ತೊಂದರೆಗೆ ಒಳಗಾಗಿದ್ದಾರೆ.ಅಲ್ಲದೇ ರೈತರು ಬೆಳೆದ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿರುವುದನ್ನು ಗಮನಿಸಿ ಇಂತಹ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಿಸುವುದು ಉಚಿತವಲ್ಲ ಎಂಬ ಕಾರಣಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸದೇ ಬಡವರಿಗೆ ಹಾಗೂ ನಿರಾಶ್ರಿತರಿಗೆ ಆಹಾರ ಪದಾರ್ಥಗಳನ್ನು ಹಂಚಿ ಮಾನವೀಯತೆ ಮೆರೆಯಿರಿ ಎಂದು ಹೇಳಿದಕ್ಕೆ, ನಾವು ಈ ರೀತಿಯ ಸರಳ ಆಚರಣೆ ಮಾಡಿದ್ದೆವೆ ಎಂದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಕಾಂಗ್ರೆಸ್ ಮುಖಂಡ ರಾಜೇಶ ಯನಗುಂಟಿಕರ್, ಕುಮಾರ ಚವ್ಹಾಣ, ಮರಲಿಂಗ ಕಮರಡಗಿ,ನಗರಸಭೆಯ ಸದಸ್ಯ ಸೂರ್ಯಕಾಂತ ಕೋಬಾಳ,ಅವಿನಾಶ ಕಂಬಾನೂರ, ನಾಗರಾಜ ಕರಣಿಕ್, ಸಾಬೇರಾಬೇಗಂ, ಕಿರಣ ಚವ್ಹಾಣ,ಅನ್ವರ ಪಾಶಾ, ಫಜಲ್ ಪಟೇಲ್,ಮೆಹಬೂಬ,ನಿಂಗಣ್ಣ, ಮಹ್ಮದ್ ಜಾವೀದ್, ಮೇರಾಜ ಸಾಹೇಬ,ಇಮ್ರಾನ್,ಮಹ್ಮದ್ ರಫಿಕ್ ಕಾರೋಬಾರಿ ಸೇರಿದಂತೆ ಅನೇಕರು ಇದ್ದರು.