ಸುರಪುರ: ಮೀನುಗಾರಿಕೆ ಇಲಾಖೆಯಿಂದ ನಗರದ ಗಂಗಾಮಾತ ಮೀನುಗಾರರ ಸಂಘದ ಅನೇಕ ಸದಸ್ಯರಿಗೆ ಮೀನುಗಾರಿಕೆಯ ಸಲಕರಣೆಗಳನ್ನು ವಿತರಿಸಲಾಯಿತು.
ನಗರದ ಮೀನುಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಲಕರಣೆಗಳ ವಿತರಣೆ ಮಾಡಿದ ತಾಲೂಕು ಪಂಚಾಯತಿ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಅವರು ಮಾತನಾಡಿ,ರಾಷ್ಟ್ರೀಯ ವಿಕಾಸ ಯೋಜನೆಯಡಿ ಒಳನಾಡು ಮೀನುಗಾರರಿಗೆ ಉಚಿತವಾಗಿ ಮೀನುಗಾರಿಕೆ ಸಲಕರಣೆಗಳನ್ನು ನೀಡಲಾಗುತ್ತಿದೆ,ಇವುಗಳನ್ನು ಪಡೆದುಕೊಂಡು ತಾವೆಲ್ಲರು ಉತ್ತಮವಾದ ಬದುಕನ್ನು ರೂಪಿಸಿಕೊಳ್ಳುವಂತೆ ಕರೆ ತಿಳಿಸಿದರು.
ಸುಮಾರು ಮೂವತ್ತು ಜನ ವೃತ್ತಿ ನಿರತ ಮೀನುಗಾರರಿಗೆ ಮೀನುಗಾರಿಕೆಯ ಬಲೆ ಸೇರಿದಂತೆ ಮತ್ತಿತರೆ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಬೋವಿ ಮುಖಂಡರಾದ ಭೀಮಣ್ಣ ಬೇವಿನಾಳ ಗಂಗಾಮಾತ ಮೀನುಗಾರರ ಸಂಘದ ಅಧ್ಯಕ್ಷ ಜೆಟ್ಟೆಪ್ಪ ವಾರಿ ಮಾನಪ್ಪ ಚಳ್ಳಿಗಿಡ ಶಿವರಾಮ ಜಾಗರಾಜ ದೇಸಾಯಿ ಸೇರಿದಂತೆ ಅನೇಕರಿದ್ದರು.