ಸುರಪುರ: ತಾಲೂಕಿನ ರುಕ್ಮಾಪುರದ ಗ್ರಾಮದಲ್ಲಿ ಶ್ರೀ ಖಾಸ್ಗತೇಶ್ವರ ಸಂಗೀತ ನೃತ್ಯ ಕಲಾ ಸಂಸ್ಥೆಯ ವತಿಯಿಂದ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಮಾತನಾಡಿ,ಯಾದಗಿರಿ ಜಿಲ್ಲಾ ಸಹಾಯಕ ನಿರ್ದೇಶಕನಾಗಿ ಆಗಮಿಸಿ ಮೊದಲನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ತುಂಬಾ ಖುಷಿಯಾಗುತ್ತಿದೆ ಎಂದರು.
ಗೃಹರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶರಣಪ್ಪ ತೊರಣಕರ್ ಮಾತನಾಡಿದರು,ಮಾನಪ್ಪ ಬಡಿಗೇರ ವೇದಿಕೆ ಮೇಲಿದ್ದರು.ಹುಣಸಗಿ ಸಂಗೀತ ಶಾಲೆಯ ಮುಖ್ಯಸ್ಥರಾದ ಶರಣಮ್ಮ ದೊಡ್ಮನಿ ಕಸಾಪ ಸದಸ್ಯ ರಾಘವೇಂದ್ರ ಭಕ್ರಿ ಚುಟುಕು ಸಾಹಿತಿ ಬೀರಣ್ಣ ಬಿ.ಕೆ,ನಾಗಪ್ಪ ಮಾಸ್ತರ ಕುಂಬಾರಪೇಟ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರೇಮ ಜಿ ಹುಲಕಲ್ ಸಂಜನಾ ಅಂಕಿತಾ ನಿರೀಕ್ಷಾ ಪವಿತ್ರಾ ಭೂಮಿಕಾ ವಷಿತಾ ಸೃಷ್ಟಿ ಮಾನಸಾ ಶಿವಾನಿ ನಿಖಿತಾ ಮಕ್ಕಳಿಂದ ನಡೆದ ಸಂಗೀತ ನೃತ್ಯ ಪ್ರದರ್ಶನ ನೊಡುಗರ ಗಮನ ಸೆಳೆಯಿತು.
ಸಂಸ್ಥೆಯ ಸಂಚಾಲಕ ಅನಿಲ್ ಕುಮಾರ ಸ್ವಾಗತಿಸಿದರು,ಉಪನ್ಯಾಸಕ ವೆಂಕಟೇಶ ಪಾಟೀಲ್ ನಿರೂಪಿಸಿದರು,ಮಹಾಂತೇಶ ಹಿರೇಮಠ ವಂದಿಸಿದರು.ಕಾರ್ಯಕ್ರಮದಲ್ಲಿ ಅನೇಕ ಜನ ಮಕ್ಕಳ ಪಾಲಕ ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.