26ಕ್ಕೆ ಅಖಿಲ ಭಾರತ ಮುಷ್ಕರದಲ್ಲಿ ಭಾಗವಹಿಸಲು ಅಂಗನವಾಡಿ ನೌಕರರಿಗೆ ಅನುಮತಿ ಒತ್ತಾಯ

0
73

ಸುರಪುರ: ಇದೇ ತಿಂಗಳ ೨೬ನೇ ತಾರೀಖು ಕಾರ್ಮಿಕರ ಅನೇಕ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ನಡೆಸುತ್ತಿರುವ ಅಖಿಲ ಭಾರತ ಮುಷ್ಕರದಲ್ಲಿ ತಾಲೂಕಿನ ಎಲ್ಲಾ ಅಂಗನವಾಡಿ ನೌಕರರು ಭಾಗವಹಿಸಲು ಅನುಮತಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಲಾಲಸಾಬ್ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಅನೇಕ ಮುಖಂಡರು ಮನವಿ ಸಲ್ಲಿಸಿ ಅಂಗನವಾಡಿ ನೌಕರರಿಗೆ ೨೧ ಸಾವಿರ ವೇತನ ನೀಡುವುದು,ಶಾಲಾ ಪೂರ್ವ ಶಿಕ್ಷಣ ಅಂಗನವಾಡಿಗಳಲ್ಲಿಯೆ ತೆರೆಯುವಂತೆ ಮನವಿ ಸೇರಿದಂತೆ ಅನೇಕ ವಿಷಯಗಳ ಕುರಿತು ಮುಷ್ಕರದಲ್ಲಿ ಒತ್ತಾಯಿಸಲಾಗುತ್ತಿದ್ದು.ಆದ್ದರಿಂದ ನಮ್ಮ ಎಲ್ಲಾ ಅಂಗನವಾಡಿ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದು ಅದಕ್ಕೆ ಪರವಾನಿಗೆ ನೀಡಬೇಕೆಂದು ಯೋಜನಾಧಿಕಾರಿ ಲಾಲಸಾಬ್ ಅವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಸ್ಸಮ್ಮ ದೊರೆ ಪ್ರಧಾನ ಕಾರ್ಯದರ್ಶಿ ಸುರೇಖಾ ಶಾಂಭವಿ ಕೊಳೂರ ಬಸಮ್ಮ ಗುಂಡಲಗೇರಿ ನಸೀಮಾ ಮುದನೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here