ಸುರಪುರ: ತೈಲ ಮತ್ತು ನೈಸರ್ಗಿಕ ಅನೀಲ ನಿಗಮ ಲಿಮಿಟೆಡ್ ಅಂಗ ಸಂಸ್ಥೆ ಮಂಗಳೂರು ಹಾಘು ಕೃತಕ ಅಂಗಾಂಗ ತಯಾರಿಕ ಕಾರ್ಪೋರೇಷ್ನ ಆಫ್ ಇಂಡಿಯಾ ಮತ್ತು ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ಹುಣಸಗಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ೭೮ ಜನ ವಿಕಲಾಂಗರಿಗೆ ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಸ್ಥಾವರಮಠ ಉದ್ಘಾಟಿಸಿ ಸಲಕರಣೆ ವಿತರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು,ವೈದ್ಯಾಧಿಕಾರಿ ಧರ್ಮರಾಜ ಹೊಸಮನಿ,ಉಪ ಖಜಾನಾಧಿಕಾರಿ ಸಣ್ಣಕೆಪ್ಪ ಗುರುದೇವಿ ಹಿರೇಮಠ ಎಮ್.ಆರ್.ಡಬ್ಲ್ಯೂ ಮಾಳಪ್ಪ ಪೂಜಾರಿ ಇದ್ದರು.ಈ ಸಂದರ್ಭದಲ್ಲಿ ವ್ಹೀಲ್‌ಚೇರ್ ಕ್ಯಾಲಿಪರ್ ತ್ರಿಚಕ್ರ ವಾಹನ ಶ್ರವಣ ಸಾಧನ ಉರುಗೋಲು ಕೃತಕ ಅಂಗಾಂಗ ಹಾಗು ಬಗಲ ಬಡಿಗೆ ವಿತರಿಸಿದರು.
ವಿಕಲಚೇತನರ ಹಕ್ಕುಗಳ ಒಕ್ಕೂಟದ ವಿಭಾಗಿಯ ಅಧ್ಯಕ್ಷ ಸಂಗನಗೌಡ ಧನರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು,ರೇಣುಕಾ ಫೌಜದಾರ ಪ್ರಾರ್ಥಿಸಿದರು,ಗುರು ಗುತ್ತೇದಾರ ಸ್ವಾಗತಿಸಿದರು,ಸಿದ್ದು ಯಡಹಳ್ಳಿ ನಿರೂಪಿಸಿದರು,ಕುಮಾರಸ್ವಾಮಿ ರಾಠೋಡ ವಂದಿಸಿದರು.