ಹೊಲಿಗೆ ಯಂತ್ರ ಮಂಜೂರು ಮಾಡಲು ಲಂಚ: ಪ್ರಭಾರಿ ಪಿಡಿಓ ಎಸಿಬಿ ಬಲೆಗೆ

0
508

ಕಲಬುರಗಿ : ಹೊಲಿಗೆ ಯಂತ್ರ ಮಂಜೂರು ಮಾಡಲು ಪಿಡಿಓ ಅಧಿಕಾರಿ ಲಂಚದ ಬೇಡಿಕೆ ಇಟ್ಟು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮ ಪಂಚಾಯತ್‌ ಪ್ರಭಾರಿ ಪಿಡಿಓ ಗಂಗಾಧರ ಮಾಡಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ, ಅಂಗವಿಕಲರ ವಿಶೇಷ ಹಣಕಾಸು ಯೋಜನೆ 5% ದಲ್ಲಿ ಫಲಾನುಭವಿಗಳಿಗೆ ಯೋಜನೆಯ ಹಣಕಾಸು ನೆರವು ನೀಡಲು ಲಂಚ ಕೇಳಿದರು.

Contact Your\'s Advertisement; 9902492681

ಹೊಲಿಗೆ ಯಂತ್ರ ಮಂಜೂರು ಮಾಡಲು ವಿಕಲಚೇತನ ಸುಭಾಷ್ ಎಂಬ ಅರ್ಜಿದಾರರಿಗೆ ಎರಡು ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇಂದು ಎರಡು ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಎಸ್ಪಿ ಮಹೇಶ ಬೆಗಣ ಅವರ ನೇತೃತ್ವದಲ್ಲಿ ನಗದು ವಶಪಡಿಸಿಕೊಂಡಿದ್ದು,  ಆರೋಪಿ ಗಂಗಾಧರ್ ಮೂಲತಹ ಕಾರ್ಯದರ್ಶಿಯಾಗಿ ಬೇರೊಂದು ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ,ಪ್ರಭಾರಿ ಮೇರೆಗೆ ಇಲ್ಲಿನ ಕೆಲ್ಲೂರು ಪಂಚಾಯಿತಿ ಅಭಿವೃದ್ಧಿಕಾರಿ ನೇಮಕಗೊಂಡಿದ್ದರು.

ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರದ ಅನೇಕ ಕೃತ್ಯ ಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here