ಜೇವರ್ಗಿ: ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸ್ವತಂತ್ರ ಸಮಾನತೆ ಹಾಗೂ ಸಹೋದರತೆ ಭಾತೃತ್ವದ ಅಂಶಗಳನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಬರುತ್ತಿರುವ ಭಾರತದ ಸಂವಿಧಾನದ ಸಮರ್ಪಣೆಯನ್ನು ಮಾಡಿಕೊಂಡಿರುವ ಇಂದಿನ ದಿನವನ್ನು ಭಾವೈಕ್ಯತೆಯ ಸಾಮರಸ್ಯದ ದಿನವನ್ನು ಆಚರಿಸಲು ಜೇವರ್ಗಿ ತಾಲೂಕು ದಲಿತ ಸಮನ್ವಯ ಸಮಿತಿಯ ಕಾರ್ಯಕರ್ತರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಇಲ್ಲಿನ ಬಸ್ ನಿಲ್ದಾಣದ ಹತ್ತಿರ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಉಪನ್ಯಾಸ ಹಾಗೂ ಸಂವಿಧಾನದ ಕುರಿತು ವಿಚಾರಗೋಷ್ಠಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ದಮ್ಮನಾಗ ಬಂತೇಜಿ ಹಾಗೂ ಸಿದ್ಧ ಕಬೀರಾನಂದ ಸ್ವಾಮೀಜಿ ಚಿಗರಳ್ಳಿ ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಂತಪ್ಪ ಕೂಡಲಗಿ ಜಿಲ್ಲಾ ಪಂಚಾಯತ್ ಸದಸ್ಯರು ನೆರವೇರಿಸಲಿದ್ದಾರೆ. ಭಾವಚಿತ್ರಕ್ಕೆ ಮಾಲಾರ್ಪಣೆ ತಹಸೀಲ್ದಾರ ಸಿದ್ದರಾಯ್ ಬೋಸ್ಗೆ ಮಾಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮರಾಯನ ನಗನೂರ ದಲಿತ ಮುಖಂಡರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು ಹಾಗೂ ಬುದ್ಧಿಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.