- ಬಸವರಾಜ ಸಿನ್ನೂರ
ಶಹಾಪುರ: ಈಜಾಡಲು ಹೋಗಿ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಅಬ್ದುಲ್ ಬಾಷಾ ದರ್ಗಾದ ಸಮೀಪದಲ್ಲಿ ನಿನ್ನೆ ಸಾಯಂಕಾಲ 5 ಗಂಟೆಯ ಸುಮಾರಿಗೆ ಜರುಗಿದೆ.
ಮೃತಪಟ್ಟ ಬಾಲಕರು ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಸಂತೋಷ್ ಸೂರ್ಯಕಾಂತ (10) ಮತ್ತು ಪ್ರಜ್ವಲ್ ರಮೇಶ್(9) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಇವರು ಕುಟುಂಬದ ಸಮೇತವಾಗಿ ಅಬ್ದುಲ್ ಭಾಷನ ಕೆರೆ ದಶ೯ನಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಪರಿಸರ ಇಲಾಖೆಯ ಅಧಿಕಾರಿಗಳು ನಿಗದಿ ಪಡಿಸಿದ ಜಾಗದಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಲು ಗುಂಡಿ ತೊಡಿಸಿದ್ದರು.
ಅದರಲ್ಲಿ ನೀರು ಸಂಗ್ರಹವಾಗಿದ್ದರಿಂದ ಈಜಾಡಲು ಹೋಗಿ ಮೃತಪಟ್ಟಿರಬಹುದು ಎಂದು ಗುರುತಿಸಲಾಗಿದೆ.
ಈ ಘಟನೆಯ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.