- ಬಸವರಾಜ ಸಿನ್ನೂರ
ಶಹಾಪುರ: ಗೋವಾದ ಬಿಚೋಲಿ೦ ನ ಹೀರಾಬಾಯಿ ಸಭಾಂಗಣದಲ್ಲಿ ಜೂನ್ ೧೬ ರಂದು ೧೧ ನೇ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಹೇಶ್ ಬಾಬು ಸುರ್ವೆ ಅವರು ಹೇಳಿದರು.
ಗೋವಾದ ಕರ್ಮಭೂಮಿ ಕನ್ನಡ ಸಂಘ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಾಹಿತಿ ಪತ್ರಕರ್ತ ತಾಳಿಕೋಟಿ ಅವರ ಅಧ್ಯಕ್ಷತೆಯಲ್ಲಿ ಬಹಳ ಅದ್ದೂರಿಯಾಗಿ ಈ ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಾಂಸ್ಕೃತಿಕ ಸಮ್ಮೇಳನದಲ್ಲಿ ಕರ್ನಾಟಕದ ಹಾಗೂ ವಿವಿಧ ರಾಜ್ಯಗಳ ರಾಜಕೀಯ ಧುರೀಣರು, ಪ್ರಗತಿಪರ ಚಿಂತಕರು, ಸಾಹಿತಿಗಳು, ಮಠಾಧೀಶರು,ಹಾಗೂ ಕಲಾ ತಂಡಗಳು, ಕಲಾವಿದರು ಭಾಗವಹಿಸಿ ಕಲಾ ಪ್ರದರ್ಶನ ನೀಡಲಿವೆ ಜೊತೆಗೆ ಸಮಾಜದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಸಂಚಾಲಕ ಶಿವಬಾಲ ಸ್ವಾಮಿ ತಿಳಿಸಿದರು.