ಆತ್ಮನಿರ್ಭರ ಭಾರತಕ್ಕೆ ಶರಣರ ತತ್ವಗಳೆ ಮಾರ್ಗದರ್ಶಕ: ಶ್ರೀ ರವಿಶಂಕರ ಗೂರುಜಿ

0
51

ಬಸವಕಲ್ಯಾಣ: ವಿಶ್ವಬಸವಧರ್ಮ ಟ್ರಸ್ಟ್ ಅನುಭವಮಂಟಪ ಬಸವಕಲ್ಯಾಣ ಆಶ್ರಯದಲ್ಲಿ ೪೧ ನೇ ಶರಣಕಮ್ಮಟ ಅನುಭವಮಂಟಪ ಉತ್ಸವ-೨೦೨೦ ಉದ್ಘಾಟನೆ ಸಮಾರಂಭ ಅಂತರ್ಜಾಲ ಮೂಲಕ ನೇರವೇರಿತು. ಉದ್ಘಾಟನಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ರವಿಶಂಕರ ಗುರೂಜಿ, ಆರ್ಟ ಆಫ್ ಲಿವಿಂಗ್ ಬೆಂಗಳೂರು ಅವರು ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿವೆ ಅದರಲ್ಲಿ ವಿಷೇಶವಾಗಿ ಕರ್ನಾಟಕದಲ್ಲಿ ಬಸವಣ್ಣನವರು ಮಾಡಿದ Pಂತಿ ಅಮೋಘವಾದದ್ದು. ಜ್ಞಾನ, ಧ್ಯಾನ ಹಾಗೂ ಭಕ್ತಿಯ ಕ್ರಾಂತಿ ಬಸವಣ್ಣನವರು ಮಾಡಿದ್ದು, ನಭೂತೊ, ನಭವಿಷತಿ ಎಂಬಂತಿದೆ.

ಯಾವುದೇ ಜಾತಿ ಮತ ಭೇದಭಾವ ಇಲ್ಲದೆ ವಿಶ್ವದ ಎಲ್ಲ ಜನಾಂಗದವರನ್ನು ಒಂದುಗೂಡಿಸಿ, ಭಗವಂತನೆಡೆಗೆ ಕರೆದ್ಯೊಯುವ ಆಧ್ಯಾತ್ಮಿಕ ಕ್ರಾಂತಿ ಎನಿಸಿದೆ. ಬಸವಣ್ಣನವರ Pಂತಿ ನಾವು ಸ್ಮರಿಸಿದರೆ ನಮ್ಮಲ್ಲಿ ಉತ್ಸಾಹ ಆನಂದ ಉಂಟಾಗುತ್ತದೆ. ಶರಣರ ವಚನಗಳು ಕರ್ನಾಟಕದ ನಿಜವಾದ ಸಂಪತ್ತು ಎನಿಸಿವೆ. ಸ್ವಾವಲಂಬಿ ದೇಶಕ್ಕಾಗಿ, ಆತ್ಮನಿರ್ಭರ ಭಾರತಕ್ಕೆ ಶರಣರ ಕಾಯಕವೇ ಕೈಲಾಸ ಸಿದ್ಧಾಂತ ಅವಶ್ಯವಾಗಿದೆ. ಕಳಬೇಡ ಕೊಲಬೇಡ ಹುಸಿಯ ನ್ಮಡಿಯಲು ಬೇಡ ಎಂಬ ಬಸವಣ್ಣನವರ ವಾಣಿ ನಮ್ಮ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ನಮ್ಮ ಯುವಕರು ವಚನಗಳ ಅಧ್ಯಯನ ಮಾಡಿ ಶರಣರು ಪ್ರತಿಪಾದಿಸಿದ ತತ್ವಗಳನ್ನು ನಿಜಾಚರಣೆಯಲ್ಲಿ ತರುವ ಮೂಲಕ ಸ್ವಾವಲಂಬಿ ಆಗಬೇಕು. ಯುವಕರಲ್ಲಿ ಹೊಸ ಹುರುಪು ಬರಲು ವಚನ ಸಾಹಿತ್ಯ ಅವಶ್ಯವಾಗಿದೆ ಎಂದರು.

Contact Your\'s Advertisement; 9902492681

ಸಾನಿಧ್ಯ ವಹಿಸಿದ ಇನ್ನೊರ್ವ ಪೂಜ್ಯ ಶ್ರೀ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರಘಾಮಠ ಧಾರವಾಡ ಅವರು ೧೯೭೧-೭೨ ರಲ್ಲಿ ಕಮಲಾಪುರದಲ್ಲಿ ನಡೆದ ಶಿವಾನುಭವ ತರಬೇತಿಯಲ್ಲಿ ಅಂದಿನ ಧಾರವಾಡ ಮುರಘಾಮಠದ ಮಹಾಂತಪ್ಪಗಳ ಪ್ರೇರಣೆಯ ನುಡಿ ಕೇಳಿ ಬಸವಕಲ್ಯಾಣದಲ್ಲಿ ಅನುಭವಮಂಟಪ ನಿರ್ಮಾಣ ಕಾರ್ಯ ನಡೆದು ೧೯೮೨ ರಲ್ಲಿ ಪೂರ್ಣಗೊಳಿಸಿದ ಕೀರ್ತಿ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅಂದಿನಿಂದ ಎಲ್ಲ ವಿಧಾಯಕ ಕಾರ್ಯಗಳು ನಿರಂತರವಾಗಿ ನಡೆಯಲು ಇಂದಿನ ಭಾಲ್ಕಿ ಹಿರೇಮಠದ ಹಿರಿಯ ಮತ್ತು ಕಿರಿಯ ಪಟ್ಟದ್ದೇವರು ಅವರಿಗೆ ಸಲ್ಲುತ್ತದೆ. ಶರಣರ ಬದುಕು ಬರಹದಂತೆ ನಮ್ಮೆಲ್ಲರ ಜೀವನ ಪರಿವರ್ತನೆಗೊಳ್ಳಲಿ ಎಂದರು.

ಅನುಭವಮಂಟಪ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಂದ ಆಶಯ ನುಡಿಗಳಲ್ಲಿ ವಿಶ್ವಕ್ಕೆ ಪ್ರಪ್ರಥಮವಾಗಿ ಪ್ರಜಾಪ್ರಭುತ್ವ ಕಲ್ಪನೆ ಕೊಟ್ಟದ್ದು ಬಸವಾದಿ ಶರಣರು. ಅದು ಈ ಬಸವಕಲ್ಯಾಣದ ಅನುಭವಮಂಟಪದಿಂದಲೇ ಎಂಬುದು ಲಿಂಗಾಯತ ಧರ್ಮೀಯರಿಗೆ ಹೆಮ್ಮೆಯ ಸಂಗತಿ ಎಂದರು. ವಿಶ್ವಗುರು ಬಸವಣ್ಣನವರು ತುಳಿತಕ್ಕೆ ಒಳಗಾಗಿದವರನ್ನು ಅಪ್ಪ-ಬಪ್ಪ ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಮೂಲಕ ಸಾಮಾಜಿಕ ಸಮಾನತೆಯನ್ನು ನೀಡಿದರು. ಅಸ್ಪ್ರಶ್ಯತೆ ಜಾತಿಯತೆ, ವ್ಯೆಷ್ಯಾವೃತ್ತಿ ಹಾಗೂ ಮೂಢನಂಬಿಕೆ ನಿರ್ಮೂಲನೆಗಾಗಿ ಹೋರಾಡಿದರು.

ಅವರು ಸಾರಿದ ತತ್ವಾದರ್ಶಗಳು ಇಂದಿಗೂ ನಮಗೆ ಪ್ರಸ್ತುತವಾಗಿವೆ. ಅನುಭವ ಮಂಟಪ ಜಗತ್ತಿನ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಜನನಿ ಎಂದು ಹೆಗ್ಗಳಿಕೆಯ ಮಾತುಗಳನ್ನು ನಮ್ಮ ದೇಶದ ರಾಷ್ಟ್ರದ ರಾಜಕಾರಣಿಗಳು ಇಂದು ದೇಶ ವೀದೇಶಗಳಲ್ಲಿ ಮಾತನಾಡುತ್ತಿರುವುದು ನೋಡಿದರೆ ಬಸವ ತತ್ವದ ಪ್ರಸ್ತುತೆಯೆ ಗೊತ್ತಾಗುತ್ತದೆ. ಆ ದಿಶೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬೇಗನೆ ನೂತನ ಅನುಭವ ಮಂಟಪ ಕಟ್ಟಡದ ಕಾರ್ಯವನ್ನು ಪ್ರಾರಂಭ ಮಾಡಬೇಕು ಹಾಗೂ ಕೇಂದ್ರ ಸರ್ಕಾರ ಬಸವಕಲ್ಯಾಣಕ್ಕೆ ಅಚಿತರಾಷ್ಟ್ರೀಯ ಪ್ರವಾಸಿ ಕೇಂದ್ರವೆಂದು ಘೋಷಿಸಬೇಕು ಎಚಿದು ಒತ್ತಾಯಿಸಿದರು.

ಕಲ್ಲಿದ್ದಲ್ಲು ಮತ್ತು ಗಣಿಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರಿಂದ ಕಾರ್ಯಕ್ರಮ ಉದ್ಘಾಟಿಸಿ, ಜೀವನ ಮತ್ತು ಉಪಜೀವನ ಎರಡರ ಚರ್ಚೆ ಅನುಭವಮಂಟಪದಲ್ಲಿ ನಡೆಸಿ, ಪರಮಾರ್ಶಿಸಿ ಜೀವನ ದರ್ಶನ ಮಾಡಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಅವರ ವಚನಗಳಲ್ಲಿ ಇಡೀ ಸಂವಿಧಾನವಿದೆ. ಪ್ರಜಾಪ್ರಭುತ್ವದ ಮಾತೃಭೂಮಿ ಇಂಗ್ಲೇಡ್ ಅಲ್ಲ, ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಬಸವಣ್ಣನವರೇ ಮೂಲವ್ಯಕ್ತಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಿಶ್ವೇಶ್ವರ ಕಾಗೇರಿ ಸಭಾಪತಿಗಳು, ಕರ್ನಾಟಕ ಸರಕಾರ ಬೆಂಗಳೂರು ಅವರು ಬಸವಾದಿ ಶರಣರು ಬೋಧಿಸಿದ ವಚನ ಸಾಹಿತ್ಯ ವಿಶ್ವಕ್ಕೆ ಮಾದರಿಯಾಗಿದೆ. ವಿಶ್ವಮಾನ್ಯ ಸಾಹಿತ್ಯವೆನಿಸಿದೆ. ಅದು ನಮ್ಮ ಇಡೀ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಮುಖ್ಯಅತಿಥಿಗಳಾಗಿ ಭಾಗವಹಿಸಿದ, ಜಗದೀಶ ಶೆಟ್ಟರ್, ಬೃಹತ್ ಕೈಗಾರಿಕಾ ಸಚಿವರು, ಬೆಂಗಳೂರು ಅವರು ಶರಣರ ಸಮಾನತೆಯ ತತ್ವ ಮತ್ತು ಕಾಯಕವೇ ಕೈಲಾಸ ಸಿದ್ಧಾಂತ ನಿತ್ಯ ಜೀವನದ ರೂಢಿಯಲ್ಲಿ ಬರಲಿ ಎಂದರು. ಈಶ್ವರ ಖಂಡ್ರೆ, ಮಾಜಿಸಚಿವರು, ಶಾಸಕರು, ಭಾಲ್ಕಿ ಅವರು ಅಭಿನವ ಅನುಭವ ಮಂಟಪ ಬಸವಕಲ್ಯಾಣದ ಪರಿಸರದಲ್ಲಿ ನಿರ್ಮಾಣ ಮಾಡಿದ ಕೀರ್ತಿ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತ ಸದಸ್ಯರು ಬೆಂಗಳೂರು, ಅವರು ಬಸವಣ್ಣನವರ ಪ್ರಾಮಾಣಿಕತೆಯ ಮೌಲ್ಯವನ್ನು ತೋರಿಸುವ ಒಚಿದು ಘಟನೆಯನ್ನು ನೆನಪಿಸುವುದರ ಜೋತೆಗೆ ಸ್ತ್ರೀ ಸ್ವಾತಂತ್ರ್ಯಕ್ಕೆ ಒತ್ತು ನೀಡಿ ಸಮಾಜದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಮಾಡಿ ಕಲ್ಯಾಣ ರಾಜ್ಯದ ಕಲ್ಪನೆ ಕೊಟ್ಟವರು ಬಸವಾದಿ ಶರಣರು ಎಂದರು. ಬಸವೇಶ್ವರ ದೇವಸ್ಥಾನ ಪಂಚಕಮೀಟಿ ಅಧ್ಯಕ್ಷ ಅನೀಲ ರಗಟೆ ಗ್ರಂಥ ಲೋಕಾರ್ಪಣೆ ಮಾಡಿದರು.

ಆರಂಭದಲ್ಲಿ ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಧ್ವಜಾರೋಹಣ ನೆರವೇರಿಸಿ, ಜೀವನಕ್ಕೆ ಅರ್ಥಬರಲು ಮನುಷ್ಯತ್ವ ಬೇಕು. ತನ್ನ ತಾ ಆತ್ಮಾವಲೋಕನ ಮಾಡಿಕೊಳ್ಳುವ ಗುಣ ಬೇಕು. ಬಸವಾದಿ ಶರಣರ ಸಮಾನತೆ ತತ್ವ ವಿಶ್ವಶಾಂತಿಗೆ ರಹದಾರಿಯಾಗಿದೆ ಅದು ರೂಢಿಗೆ ಬರಬೇಕು ಎಂದರು. ಬಸವಕಲ್ಯಾಣ ಅಭಿವೃದ್ಧಿ ಬಸವಕಲ್ಯಾಣ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ ಅವರಿಂದ ವಚನಪಠಣ ನಡೆಯಿತು.

ಸಾವಿತ್ರಿ ಶರಣು ಸಲಗರ, ತಹಸೀಲ್ದಾರರು ಮತ್ತು ಸುರೇಶ ಚನ್ನಶೆಟ್ಟಿ, ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೀದರ ಅವರಿಂದ ಬಸವಗುರುಪೂಜೆ ನೇರವೇರಿತು. ವೈಜಿನಾಥ ಕಾಮಶೆಟ್ಟಿ, ಡಾ.ಎಸ್.ಬಿ.ದುರ್ಗೆ, ಕುಪೇಂದ್ರ ಪಾಟೀಲ, ಮಾಲತಿ ಇವಳೆ, ಡಾ.ಸೋಮನಾಥ ಯಾಳವಾರ, ಧನರಾಜ ತಾಳಂಪಳ್ಳಿ, ಜಯರಾಜ ಖಂಡ್ರೆ, ಗುರುನಾಥ ಕೊಳ್ಳುರು, ಅವರು ಉಪಸ್ಥಿತರಿದ್ದರು.

ಬಸವೇಶ್ವರ ದೇವಸ್ಥಾನ ಪಂಚಕಮೀಟಿ, ಸಹಕಾರ್ಯದರ್ಶಿ ಬಸವರಾಜ ಬಾಲಕಿಲೆ ಸ್ವಾಗತಿಸಿದರು. ಶಿವಕುಮಾರ ಪಂಚಾಳ ಮತ್ತು ನವಲಿಂಗ ಪಾಟೀಲ, ರಾಜಕುಮಾರ ಹೂಗಾರ ಹಾಗೂ ಸಂಗಡಿಗರಿಂದ ವಚನ ಗಾಯನ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here