ಚಿಂಚೋಳಿ: ಕಳೆದ 6 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಹೈದರಾಬಾದನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಚಿಂಚೋಳಿ ಪೆÇೀಲಿಸ್ ಠಾಣೆ ಗುನ್ನೆ ನಂ.62/2020,ಕಲಂ. 498(ಎ),302 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತಲೆ ಮರೆಸಿಕೊಂಡಿದ್ದ ತಾಲೂಕಿನ ಅಣವಾರ ಗ್ರಾಮದ ಮಲ್ಲಿಕಾರ್ಜುನ ತಂದೆ ಹಣಮಂತಪ್ಪ (44) ಎಂಬ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಚಿಂಚೋಳಿ ಪೆÇೀಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ್ ಮಾರ್ಗದರ್ಶನದಲ್ಲಿ ಹಾಗೂ ಪಿಎಸ್‍ಐ ರಾಜಶೇಖರ ರಾಠೋಡ ನೇತೃತ್ವದ ತಂಡ ಬಲೆಬೀಸಿ ಸೇರೆ ಹಿಡಿದಿದೆ ಆರೋಪಿ ತನ್ನ ಪತ್ನಿ ಶ್ರೀದೇವಿ ಮಲ್ಲಿಕಾರ್ಜುನ (36) ರನ್ನು ಕಳೆದ ಮೇ 24,ರ ರಾತ್ರಿ 1-00 ಗಂಟೆ ಸುಮಾರಿಗೆ ಕೊಲೆ ಮಾಡಿ ಪರಾರಿಯಾಗಿದ್ಧಾನೆ ಎಂದು ಕೊಲೆಯಾದ ಶ್ರೀದೇವಿಯ ತಾಯಿ ಅನುಶಾದೇವಿ ಗಂಡ ಹಾಶಪ್ಪಾ ನೀಡಿರುವ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಚಿಂಚೋಳಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಿಎಸ್‍ಐ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುಂಚಾವರಂ ಪಿಎಸ್‍ಐ ಉಪೇಂದ್ರ ಕುಮಾರ. ಪೆÇಲೀಸ್ ಸಿಬ್ಬಂದಿಗಳಾದ ಮರಲಿಂಗ.ರಮೇಶ. ನಾಗರಾಜ ಎಮ್ ಶೇಳಕೆ. ಅಂಬರಾಯ ಪೂಜಾರಿ. ಈಶ್ವರ ಜಾಧವ. ವಿಧ್ಯಾಸಾಗರ. ಶಿವರಾಜ ಉದಯ, ಸೋಮಶಂಕರ ಇದ್ದರು.