ಅಮರಣ್ಣ ಸಜ್ಜನ್ ಅವರ ಆಸ್ತಿ ದಾಖಲೆ ನೀಡದಿದ್ದರೆ ತಹಸೀಲ್ ಮುಂದೆ ಧರಣಿ: ಆರ್.ವಿ.ನಾಯಕ ಎಚ್ಚರಿಕೆ

0
42

ಸುರಪುರ: ನಗರದ ರಂಗಂಪೇಟೆಯ ನಿವಾಸಿಯಾದ ಅಮರಣ್ಣ ತಂ/ ಚಂದ್ರಶೇಖರ ಸಜ್ಜನ ಅವರು ತಮ್ಮ ಆಸ್ತಿ ಧಾಖಲೆಗಳನ್ನು ದೃಢೀಕರಿಸಿ ನೀಡುವಂತೆ ಬಹುದಿನಗಳಿಂದ ತಹಶೀಲ್ದಾರ ಕಛೇರಿಗೆ ಅಲೆದಾಡಿದರು ಸಹ ಸರಿಯಾದ ದಾಖಲೆಗಳನ್ನು ನೀಡದೆ ಇರುವುದರಿಂದ ಬೇಸತ್ತು ಅವರು ದಿನಾಂಕ ೦೫.೧೦.೨೦೨೦ ರಂದು ತಹಶೀಲ ಕಛೇರಿ ಮುಂಭಾಗದಲ್ಲಿ ಕುಟುಂಬಸಮೇತವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡು ಇಂದಿಗೆ ಸುಮಾರು ದಿನಗಳಾಯಿತು.

ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಆಸ್ತಿ ದಾಖಲೆಗಳನ್ನು ಪಡೆಯಲು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳವ ಅನಿವಾರ್ಯತೆ ಎದುರಾಗಿದೆ ಎಂದರೆ ಇನ್ನುಳಿದ ಜನಸಾಮಾನ್ಯರ ಪರಿಸ್ಥಿತಿ ಏನು? ಅಲ್ಲದೆ ತಹಶಿಲ ಕಾರ್ಯಾಲಯದಲ್ಲಿ ದಿನ ನಿತ್ಯ ರೈತರು ಪಹಣಿ ತಿದ್ದುಪಡಿ ಮತ್ತು ಸರ್ವೇ ಕಾರ್ಯ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ತಹಶೀಲ ಕಚೇರಿಯ ಸಿಬ್ಬಂದಿಯಿಂದ ತೊಂದರೆ ಅನುಭವಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.

Contact Your\'s Advertisement; 9902492681

ಸಿಬ್ಬಂದಿಗಳು ಮತ್ತು ಅಧಿಕಾರಿಗಳು ತೋರುತ್ತಿರುವ ಧೋರಣೆಯನ್ನು ಗಮನಿಸಿದರೆ ತಾಲೂಕಿನಲ್ಲಿ ಆಡಳಿತವೈಫಲ್ಯತೆ ಎದ್ದುತೋರುತ್ತದೆ, ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಯಾವುದೊ ಒತ್ತಡಕ್ಕೆ ಹಾಗೂ ಆಮೀಷಕ್ಕೆ ಒಳಗಾಗಿ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಈ ರೀತಿ ಉದ್ದೇಶಪೂರ್ವಕ ವಿಳಂಬನೀತಿ ಅನುಸರಿಸುತ್ತಿರುವುದು ನೋಡಿದರೆ ಜನ ಸಾಮಾನ್ಯರಿಗೆ ಅನ್ಯಾಯವೆಸಗುತ್ತಿರಿವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಲವುಬಾರಿ ಮೌಕಿಕವಾಗಿ ಮತ್ತು ಲಿಖಿತರೂಪದಲ್ಲಿ ಸದರಿ ವಿಷಯದ ಕುರಿತು ಕಛೇರಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಸಹ ಅಧಿಕಾರಿಗಳು ಅಕ್ರಮ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ.

ಅಲ್ಲದೆ ಸದರಿ ಧರಣೀನಿರತ ಕುಟುಂಬದವರಿಗೆ ಅವರು ಕೇಳಿರುವ ದಾಖಲಾತಿಗಳನ್ನು ನ್ಯಾಯಯುತವಾಗಿ ಧೃಡೀಕರಿಸಿ ದಾಖಲಾತಿಗಳನ್ನು ಒದಗಿಸಬೇಕು ಮತ್ತು ತಹಶೀಲ ಕಛೇರಿಯಲ್ಲಿ ವಿಳಂಬ ನೀತಿ ಅನುಸರಿಸದೆ ಜನರ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಕ್ರಮಕೈಗೊಳ್ಳಬೇಕು. ಒಂದುವೇಳೆ ಇದೇ ರೀತಿ ಮುಂದುವರೆದರೆ ತಹಶೀಲ ಕಛೇರಿ ಮುಂಭಾಗದಲ್ಲಿ ಧರಣಿಸತ್ಯಾಗ್ರಹ ನಿರತ ಕುಟುಂಬದವರೊಂದಿಗೆ ಹಾಗೂ ಜನ ಸಾಮಾನ್ಯರೊಂದಿಗೆ ಧರಣಿ ನಡೆಸಬೇಕಾಗುತ್ತದೆ ಎಂದು ತಹಶೀಲ್ದಾರರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here