ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳ ಬಳಗದ ಅಧ್ಯಕ್ಷ ಚಂದ್ರಕಾಂತ ಕೆ.ನಾಟೀಕಾರ ಅವರ ನೇತೃತ್ವದಲ್ಲಿ ಹೊದಿಕೆ ಮತ್ತು ಹಣ್ಣು ಹಂಪಲ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಶರಣಗೌಡ ಪಾಟೀಲ, ಕಾಂಗ್ರೆಸ್ ದಕ್ಷಿಣ ಮತಕ್ಷೇತ್ರದ ಅಧ್ಯಕ್ಷ ಶಿವಾನಂದ ಹೊನಗುಂಟಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ನಾಟೀಕಾರ, ಹೆಚ್‌ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಸರ್ಕಾರ ನಿವೃತ್ತ ಮುಖ್ಯಗುರುಗಳಾದ ಧರ್ಮಣ್ಣ ನಾಟೀಕಾರ, ಮುಖಂಡರಾದ ರುಕಪ್ಪ ಕಾಂಬಳೆ, ಶಿವಾಜಿ ಎಸ್.ಪಟ್ಟಣ, ಸುದರ್ಶನ ಎಸ್.ನರಬಿ, ಶರಣಯ್ಯ ಸ್ವಾಮಿ, ಶರಣಪ್ಪ ಭಾವೆ, ಮಲ್ಲಿಕಾರ್ಜುನ ಎಂ.ಕೊಬಾಳ, ರಾಜು ಯಳವಂತಗಿ, ಜೇಟ್ಟಪ್ಪ ಹಾದಿಮನಿ, ರಾಣ್ಣಪ್ಪ ಅಲ್ಲನ, ಹುಟೇಪ್ಪಾ ಕನಕಗಿರಿ, ಪಿಂಟ್ಟು ಸ್ವಾಮಿ, ರುಕ್ಮೋದ್ದಿನ, ಧರ್ಮಣ್ಣ ಪಟ್ಟಣ, ಮಹಾದೇವ ಗೌಡ, ನಿಂಗಣ್ಣಾ ಪೂಜಾರಿ, ಮಹಾಂತೇಶ ಪಾಟೀಲ, ಮಲ್ಲಿಕಾರ್ಜುನ ಕೋಬಾಳಕರ್, ನಿಂಗಣ್ಣ ಕಂಠಿಕರ ಇದ್ದರು.