ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳುವಳಿಗೆ ಬೆಂಬಲಿಸಿ ಎಐಡಿವಾಯ್ಓ ಪ್ರತಿಭಟನೆ

0
66

ಶಹಾಬಾದ:ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳುವಳಿಗೆ ಬೆಂಬಲಿಸಿ ನಗರದ ಎಐಡಿವಾಯ್ಓ ಸಂಘಟನೆ ವತಿಯಿಂದ ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಎಐಡಿವಾಯ್ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿಯವರ ಸರಕಾರ ಮೂರು ಕಾಯ್ದೆಗಳನ್ನು ತರುವ ಮೂಲಕ ರೈತರ ಹಾಗೂ ಕಾರ್ಮಿಕ ವರ್ಗವದರು ಹಕ್ಕುಗಳನ್ನು ಸಂಪೂರ್ಣ ದಮನ ಮಾಡಲು ಹೊರಟಿದೆ.ಯಾವುದೇ ಕಾನೂನುಗಳನ್ನು ತಿದ್ದುಪಡಿ ಮಾಡುವ ಮುಂಚೆ ಸಂಬಂಧಪಟ್ಟವರ ಜತೆ ಮಾತನಾಡದೇ ಏಕಾಏಕಿ ನಿರ್ಧಾರ ತೆಗೆದುಕೊಂಡು, ಕಾನೂನುಗಳನ್ನು ತಿದ್ದುಪಡಿ ಮಾಡಿ ರೈತರ ಬದುಕಿಗೆ ಕೊಳ್ಳಿ ಇಡಲು ಹೊರಟಿದೆ. ಕಾರ್ಪೋರೇಟರ್ ಅಂಬಾನಿ, ಅಧಾನಿಯಂತಹ ಅನೇಕ ಶ್ರೀಮಂತರ ಪರವಾಗಿ ಕಾನೂನುಗಳನ್ನು ತಿದ್ದಪಡಿ ಮಾಡುತ್ತಿರುವುದು ನೋಡಿದರೇ, ಇದೊಂದು ಜನವಿರೋಧಿ ಬಿಜೆಪಿ ಸರಕಾರವಾಗಿದೆ.ಜನವಿರೋಧಿ ಕಾಯ್ದೆಗಳನ್ನು ಕೈಬಿಟ್ಟು, ಕೇಂದ್ರ ಸರಕಾರ ಕೂಡಲೇ ರೈತರ ಬೇಡಿಕೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಎಐಡಿವಾಯ್ಓ ಅಧ್ಯಕ್ಷ ಸಿದ್ದು ಚೌದ್ರಿ ಮಾತನಾಡಿ, ಕೇಂದ್ರ ಸರಕಾರವು ಯುವಜನರಿಗೆ ಬರಿ ಸುಳ್ಳು ಆಶ್ವಸನೆ ನಿಡುತ್ತಿದೆ ಎರಡು ಕೋಟಿ ಉದ್ಯೋಗ ನೀಡುತ್ತೆವೆ. ಕಪ್ಪು ಹಣ ತರುತ್ತೆವೆ ಎಂದು ಅಧಿಕಾರಕ್ಕೆ ಬಂದ ಸರಕಾರವು ಇಲ್ಲಿವರೆಗೆ ಯಾವ ಮಾತುಕೂಡ ಉಳಿಸಿಕೊಂಡಿಲ್ಲಾ. ಇದು ಬರೀ ಸುಳ್ಳಿನ ಸರಕಾರ ಎಂದರು. ಇದರ ವಿರುದ್ದ ಯುವಜನರು ಹೋರಾಟಕ್ಕೆ ಮುಂದಾಗಬೇಕೆಂದರು.

ರೈತ ಕೃಷಿ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ರಾಜೇಂದ್ರ ಅತನೂರ ಮಾತನಾಡಿದರು. ಎಐಡಿವಾಯ್ಓ ಕಾರ್ಯದರ್ಶಿ ಪ್ರವೀಣ ಬಣವಿಕರ್,ಶಿವಕುಮಾರ ಕುಸಾಳೆ ,ನೀಲಕಂಠ ಹುಲಿ ,ಎಐಡಿವಾಯ್ಓ ಉಪಾಧ್ಯಕ್ಷ ವಿಶ್ವನಾಥ ಸಿಂಘೆ , ರಘು ಪವಾರ ,ಶ್ರೀನಿವಾಸ್, ಅನೀಲ, ಖಾನಪೂರ ,ಶಂಕರ್ ದಂಡುಗುಲ್ಕರ್ ,ಮಹಾದೇವ ಸ್ವಾಮಿ, ರಂಗು ಮಾನೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here