ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ತಳವಾರ ಸಮುದಾಯ ನಿರ್ಧಾರ

0
23

ಕಲಬುರಗಿ : ತಳವಾರ ಮತ್ತು ಪರಿವಾರ ಸಮುದಾಯಗಳಿಗೆ ಎಸ್.ಟಿ ಜಾತಿ ಮೀಸಲು ಪ್ರಮಾಣ ಪತ್ರ ನೀಡುತ್ತಿಲ್ಲ, ಈ ಕುರಿತು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದೆಂದು ಶಹಾಬಾದ ತಾಲೂಕಿನ ತೋನಸನಹಳ್ಳಿ ( ಎಸ್ ) ಪೂಜ್ಯ ಶರಣ ಕೊತ್ತಲಪ್ಪ ಹೇಳಿದರು.

ನಗರದ ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ತಳವಾರ ಕುಟುಂಬಗಳಿವೆ . ಕೆಲ ಆಕಾಂಕ್ಷಿಗಳು ಚುನಾವಣೆ ಸ್ಪರ್ಧಿಸಲು ಎಸ್ ಟಿ ಜಾತಿ ಪ್ರಮಾಣ ಪತ್ರ ಪಡೆಯಲು ಆಯಾ ತಾಲೂಕಿನ ತಹಸೀಲ್ದಾರ ಕಛೇರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ . ಆದರೆ ತಹಸೀಲ್ದಾರರು ಸ್ಪಂದಿಸುತ್ತಿಲ್ಲ . ಕಳೆದ 3 ತಿಂಗಳನಿಂದ ಧರಣಿ ಸತ್ಯಾಗ್ರಹ ಕೈಗೊಂಡ ಸರ್ಕಾರದ ಗಮನ ಸೆಳೆಯಲಾಗಿತ್ತು . ರಾಜ್ಯ ಸರ್ಕಾರ ಸೂಕ್ತ ಭರವಸೆ ಮೇರೆಗೆ ಕಲಬುರಗಿ ಜಿಲ್ಲಾಧಿಕಾರಿಗಳು ಎಸ್.ಟಿ ಪ್ರಮಾಣ ಪತ್ರ ಮಂಜೂರು ಮಾಡುವ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ . ಆದರೆ ಅದನ್ನು ತೋರಿಸಿದರೆ ವಿತರಿಸುವುದಕ್ಕೆ ವಂಶಾವಳಿ ತರುವಂತೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಸ್ವಾಮೀಜಿಯವರು ದೂರಿದರು.

Contact Your\'s Advertisement; 9902492681

ಈ ವಿಷಯಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಕಛೇರಿಯ ತಹಸೀಲ್ದಾರರನ್ನು ಏಕಾಏಕಿ ವರ್ಗಾವಣೆಗೊಳಿಸಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಕುತಂತ್ರ ಅಡಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಕೂಡಲೇ ಎಸ್.ಟಿ ಪ್ರಮಾಣ ಪತ್ರ ಕೊಡದಿದ್ದರೇ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಸಿದರು.

ನಮಗೆ ಸಂವಿಧಾನದತ್ತ ಸೌಲಭ್ಯ ನೀಡುವಲ್ಲಿ ಆಳುವ ಸರ್ಕಾರಗಳು ಪಕ್ಷಪಾತ ಮಾಡುತ್ತಿದ್ದು, ಅದೇ ರೀತಿ ರಾಜ್ಯ ಸರ್ಕಾರ ಎಸ್.ಸಿ, ಎಸ್.ಟಿ ಮತ್ತು ಓಬಿಸಿ ವರ್ಗಕ್ಕೆ ರಾಜಕೀಯ ಸ್ಥಾನಮಾನ ನೀಡಲಾಗುತ್ತಿದೆ ಆರೋಪವಾಗಿದ್ದು, ಆದರೆ ಕಾರ್ಯರೂಪದಲ್ಲಿ ಸಂವಿಧಾನಬದ್ದ ಸೌಲಭ್ಯ ದೊರಕಿಸಿಕೊಡಲು ಮೀನಾಮೇಷ ಎಣಿಸುತ್ತಿದ್ದಲ್ಲದೇ, ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದರು.

ಈ ಸಂದರ್ಭದಲ್ಲಿ ಚಿದಾನಂದ ಸ್ವಾಮೀಜಿ ಅವರಳ್ಳಿ, ಭಾರತ ಧ್ವಜ ಸ್ವಾಮೀಜಿ ಹಾಗೂ ಸರ್ದಾರ ರಾಯಪ್ಪ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here