ಶಹಾಪುರ :ಕವಿಗಳಿಗೆ ಕಲಾವಿದರಿಗೆ ಹಾಗೂ ವಿವಿಧ ಪ್ರಕಾರದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಚಟುವಟಿಗಳು ಮಾಡುವುದರ ಮೂಲಕ ಸಂಘ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿಗಳಾದ ಡಾ:ಅಬ್ದುಲ್ ಕರೀಂ ಕನ್ಯಾಕೋಳೂರ ಹೇಳಿದರು.
ಶಹಾಪೂರ ನಗರದ ದೇಶ್ಮುಕ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಹತ್ತಿಗುಡೂರ ಶ್ರೀಮತಿ ಮಾತೋಶ್ರೀ ಬಸಮ್ಮ ಶರಬಣ್ಣ ಮಹಾಮನಿ ಸೇವಾ ಟ್ರಸ್ಟ್ ಉದ್ಘಾಟನಾ ಹಾಗೂ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಈ ಸಂಸ್ಥೆ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಟ್ಟು ಅವರಲ್ಲಿರುವ ಕಲೆಯನ್ನು ಹೆಕ್ಕಿ ತೆಗೆಯುವ ಮೂಲಕ ವಿಭಿನ್ನ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವುದರ ಮುಖಾಂತರ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬರುವ ಜವಾಬ್ದಾರಿ ಈ ಸಂಸ್ಥೆಯ ಮೇಲಿದೆ ಎಂದು ಸಲಹೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ತಂದೆತಾಯಿಗಳಿಗೆ ಅನಾಥಾಶ್ರಮದಲ್ಲಿ ಬಿಟ್ಟು ಮಕ್ಕಳು ವೈಭೋಗದ ಜೀವನ ನಡೆಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಇಂಥ ಸಮಯದಲ್ಲಿ ತಾಯಿಯ ಸ್ಮರಣಾರ್ಥವಾಗಿ ಇಂಥ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಸಂತೋಷದ ಸಂಗತಿ ಎಂದು ಹೇಳಿದರು.
ಶರಣ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ ತಾಯಿಯ ಹೆಸರಿನ ನೆನಪು ಸದಾ ಹಚ್ಚ ಹಸಿರಾಗಿರುವಂತೆಯೇ ಅವರ ಹೆಸರಿನಲ್ಲಿ ಒಳ್ಳೆ ಕೆಲಸ ಕಾರ್ಯಗಳು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು ಎಂದು ಹೇಳಿದರು ತಾಯಿಯ ಪ್ರೀತಿ ವಾತ್ಸಲ್ಯ ಮಮತೆ ಯಾವುದಕ್ಕೂ ಸಾಟಿ ಇಲ್ಲ ಎಂದರು.
ಖ್ಯಾತ ಕತೆಗಾರರು ಹಾಗೂ ಹಿರಿಯ ಸಾಹಿತಿಗಳಾದ ಸಿದ್ಧರಾಮ ಹೊನಕಲ್ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾವ್ಯ ಕಟ್ಟುವುದು ಒಂದು ಕಲೆಯಾಗಿದೆ,ಭಾವನಾತ್ಮಕವಾಗಿ ಹುಟ್ಟಿದ ಕವಿತೆಯ ಸಾಲುಗಳು ಪದಪುಂಜಗಳ ಪೋಣಿಸಿ ಅರ್ಥವತ್ತಾಗಿ ಸೃಜನಾತ್ಮಕವಾಗಿ ಕವಿತೆ ಕಟ್ಟಿ ಲಯಬದ್ಧವಾಗಿ ಹೆರಳುವುದು ಕವಿಗಳಾದವರೆಗೆ ಅದು ಮೊದಲಿನಿಂದಲೇ ಸಿದ್ಧಿಸಿರಬೇಕು ಎಂದು ಹೇಳಿದರು.
ಇಲ್ಲಿ ವಾಚಿಸಿದ ಹಲವಾರು ಕವಿತೆಗಳ ಸಾರಾಂಶ ತಾಯಿಯ ಪ್ರೀತಿ,ಮಮತೆ,ನೋವು-ನಲಿವು ರೈತ ನೋವು,ಗೆಳತಿಯ ನೆನಪು,ಪ್ರೀತಿ,ಪ್ರೇಮ,ಪ್ರಣಯ, ಆಡಂಬರದ ಬದುಕು, ನಿರಾಸೆಯ ಭಾವ ಹೀಗೆ ಹತ್ತಾರು ವಾಸ್ತವತೆಯ ಕುರಿತು ಇಲ್ಲಿ ಸವಿಸ್ತಾರವಾಗಿ 25 ಕ್ಕೂ ಹೆಚ್ಚು ಜನ ಕವಿಗಳು ತಮ್ಮ ಸ್ವರಚಿತ ಚುಟುಕುಗಳು ವಾಚಿಸಿ ನೆರೆದಿದ್ದ ಎಲ್ಲಾ ಜನರನ್ನು ನಗೆಗಡಲಲ್ಲಿ ತೇಲಿಸಿದರು.
ಚುಟುಕು ಕವಿಗೋಷ್ಠಿಯಲ್ಲಿ ಕೃಷ್ಣಮೂರ್ತಿ ಎ.ಎನ್. ಸುವರ್ಣ ರಾಠೋಡ್,ಲಕ್ಷ್ಮೀ ಪಟ್ಟಣಶೆಟ್ಟಿ,ಶರಣು ಕಲ್ಮನಿ, ಶಶಿಕಾಂತ್ ಜನಾರ್ದನ್, ಈಶ್ವರ್ ಶಹಾಪುರಕರ, ನೀಲಮ್ಮ ಮಲ್ಲೆ,ಈರಯ್ಯ ಕೊಳ್ಳಿಮಠ,ಜ್ಯೋತಿ ನಾಯಕ್, ಶಕುಂತಲಾ ಹಡಗಲಿ, ಮಹಾಲಿಂಗ ಗಂಗನಾಳ, ಹಣಮಂತ ಚವ್ಹಾಣ, ಶರಣಗೌಡ ಪಾಟೀಲ, ನಾನಾಗೌಡ ಚಂದಾಪೂರ್, ಸುನಂದಾ ಪಾಟೀಲ್, ಶಂಕರ್ ಹುಲಕಲ್,ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.ಅಲ್ಲದೆ ಕುಮಾರಿ ಅಮೂಲ್ಯ ಮಹಾಮನಿ ಅವ್ವ ಹೇಳಿದ 8 ಕಥೆಗಳು ಹೇಳಿದರು.
ಈ ಸಮಾರಂಭದ ವೇದಿಕೆಯ ಮೇಲೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ಧಲಿಂಗರೆಡ್ಡಿ ಸಾಹು ಹತ್ತಿಗುಡೂರ,ಟ್ರಸ್ಟಿನ ಕಾರ್ಯದರ್ಶಿಗಳಾದ ಸಿದ್ದಲಿಂಗಪ್ಪ ಮಹಾಮನಿ, ಕಲಬುರಗಿಯ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ,ರೇವಣಸಿದ್ದಪ್ಪ ಕಲುಬುರಗಿ,ಸಂಗಣ್ಣ ಮೋಟಗಿ, ಶಿವುಕುಮಾರ ಯಾದಗಿರಿ, ಮನೋಹರ್ ಅಲಬನೂರು, ಸುಧೀರ ಚಿಂಚೋಳಿ,ಈರಣ್ಣ ಅಂಗಡಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳಾಡಿದ ಹಾಸ್ಯ ಕಲಾವಿದರು ಹಾಗೂ ಮಾತೋಶ್ರೀ ಬಸಮ್ಮ ಶರಬಣ್ಣ ಮಹಾಮನಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಬಸವರಾಜ ಮಹಾಮನಿ ತಾಯಿಯ ನೆನಪಿನಲ್ಲಿ ಭಾವುಕರಾಗಿ ವೇದಿಕೆಯಲ್ಲಿ ಅವರ ಕಣ್ಣಾಲಿಗೆಗಳು ಒದ್ದೆಯಾದವು.ಈ ಕಾರ್ಯಕ್ರಮದಲ್ಲಿ ಎಲ್ಲರನ್ನು ನಗಿಸುವದಕ್ಕಿಂತ ಜಾಸ್ತಿ ಅಳುವು ತರಿಸಿದ್ದೆ ವಿಶೇಷವಾಗಿತ್ತು, ಯಾದಗಿರಿಯ ಶಿವಾನಿ ಡ್ಯಾನ್ಸ್ ಗ್ರೂಪ್ ತಂಡದ ಮಕ್ಕಳಿಂದ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಕಾರ್ಯಕ್ರಮದಲ್ಲಿ ರಮೇಶ್ ಕೆಂಬಾವಿ ಪ್ರಾರ್ಥಿಸಿದರೆ ಸಂತೋಷ ಸತ್ಯಂಪೇಟೆ ಸ್ವಾಗತಿಸಿದರು ಬಸವರಾಜ ಸಿನ್ನೂರ ನಿರೂಪಿಸಿದರು ತಿಪ್ಪಣ್ಣ ಕ್ಯಾತನಾಳ ವಂದಿಸಿದರು.