ಸುರಪುರ: ದೇಶದಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಮಸೂದೆ ಹಾಗು ಇನ್ನಿತರೆ ಕಾಯ್ದೆಗಳನ್ನು ಕೈಬಿಡುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲೂಕಿನ ದೇವಾಪುರ ಕ್ರಾಸ್‌ಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಸರಕಾರ ಕೃಷಿ ಮಸೂದೆಯನ್ನು ಜಾರಿಗೊಳಿಸುವ ಮೂಲಕ ದೇಶದ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ,ರೈತ ವಿರೋಧಿಯಾಗಿರುವ ಕೃಷಿ ಕಾಯ್ದೆ ವಿದ್ಯೂತ್ ಕಾಯ್ದೆ ಮತ್ತು ಮಾರುಕಟ್ಟೆ ಕಾಯ್ದೆಯನ್ನು ಕೂಡಲೆ ಕೈಬಿಡಬೇಕೆಂದು ಆಗ್ರಹಿಸಿದರು.
ಅಲ್ಲದೆ ಕೇಂದ್ರ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ರೈತರ ಮೇಲೆ ಜಲಪಿರಂಗಿ ಮತ್ತು ಲಾಠಿ ಚಾರ್ಜ್ ನಡೆಸುವ ಮೂಲಕ ರೈತರನ್ನು ಭಯೋತ್ಪಾದಕರಂತೆ ಕಾಣಲಾಗುತ್ತಿದೆ,ಇಂತಹ ಕೇಂದ್ರ ಸರಕಾರದ ನಡೆಯನ್ನು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿದರು.ಅಲ್ಲದೆ ಸರಕಾರ ಕೂಡಲೆ ಕೃಷಿ ಮತ್ತಿತರೆ ಮೂರು ಕಾಯ್ದೆಗಳನ್ನು ಕೈ ಬಿಡಬೇಕು,ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಮತ್ತು ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕು ಮುನ್ನ ಸುಮಾರು ಎರಡು ಗಂಟೆಗಳ ಕಾಲ ಬೀದರ ಬೆಂಗಳೂರು ರಾಜ್ಯ ಹೆದ್ದಾರಿ ಬಂದ್ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುಧ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದರು.ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪಿಐ ಎಸ್.ಎಮ್.ಪಾಟೀಲ್ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸನಗೌಡ ಬಿರಾದಾರ್ ಮುಖಂಡರಾದ ಮಹಾದೇವಿ ಎಸ್.ಬೇವಿನಾಳಮಠ ರಾಮನಗೌಡ ಯಾಳಗಿ ಮಹೇಶಗೌಡ ಸುಬೇದಾರ ಶಿವಶರಣಪ್ಪ ಸಾಹು ಶಿವರಾಜ ಕಲಕೇರಿ ಸಂಗಣ್ಣ ಮುಡಬೂಳ ಹೆಚ್.ಆರ್.ಬಡಿಗೇರ ಶಿವರಾಮ ಚವ್ಹಾಣ ದೇವರಾಜ ಗೌಡಗೇರಾ ಬಸವರಾಜ ಅಂಗಡಿ ದೇವು ಮೋಪಗಾರ ನವಾಬ ಪಟೇಲ್ ಮಾರುತಿ ಮೋಪಗಾರ ಮಾನಪ್ಪ ಬಡಿಗೇರ ನಿಂಗಣ್ಣ ಪೂಜಾರಿ ಗುರು ಹೆಗ್ಗಣದೊಡ್ಡಿ ಸೇರಿದಂತೆ ಅನೇಕರಿದ್ದರು.