ಸುರಪುರ: ನ್ಯಾಯಯುತ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರಕಾರ ದೆಹಲಿಯಲ್ಲಿ ರೈತರ ಮೇಲೆ ಜಲ ಪಿರಂಗಿ ಬಳಸಿ ಹೋರಾಟ ನಿರತ ರೈತರ ಮೇಲೆ ಹಲ್ಲೆ ನಡೆಸಿರುವುದು ಖಂಡನಿಯವಾಗಿದೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಃತ್ ಹುಸೇನ ಮಾತನಾಡಿದರು.
ರೈತರ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಬೆಂಬಲಿಸಿ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿ ಮಾತನಾಡಿ,ಸರಕಾರ ಕೂಡಲೆ ರೈತ ವಿರೋಧಿ ಕೃಷಿ ಮಸೂದೆಯನ್ನು ಕೈ ಬಿಡಬೇಕು ಅಲ್ಲದೆ ವಿದ್ಯೂತ್ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಸಂಗಣ್ಣ ಬಾಕ್ಲಿ ತಿಪ್ಪಣ್ಣ ಪಾಟೀಲ ಅಪ್ಪಣ್ಣ ಗಾಯಕವಾಡ ಶರಣಪ್ಪ ಅಕ್ಕಿ ಶಾಂತು ತಳವಾರಗೇರಾ ಇತರರಿದ್ದರು.