ಕಲಬುರಗಿ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದನ್ವಯ ಚಿಂಚೋಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳ ಮುಂದೆ ಸಹಿ ಹಾಕಿ ಮೂರು ಪ್ರತಿಗಳಲ್ಲಿ ಘೋಷಣಾ ಪತ್ರಗಳನ್ನು ನೀಡಬೇಕೆಂದು ಚಿಂಚೋಳಿ ತಹಶೀಲ್ದಾರರು ತಿಳಿಸಿದ್ದಾರೆ.
ಈ ಪೈಕಿ ಎರಡು ಘೋಷಣಾ ಪತ್ರಗಳು ಮೂಲ ಪ್ರತಿಯಲ್ಲಿ ಹಾಗೂ ಒಂದು ಜಿರಾಕ್ಸ್ ಪ್ರತಿಯಲ್ಲಿ ಸಲ್ಲಿಸಬೇಕು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಘೋಷಣಾ ಪತ್ರಗಳ ನಮೂನೆ (ಮಾದರಿಗಾಗಿ) ಸಂಬಂಧಪಟ್ಟ ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.