ಶಹಾಪುರ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಮೌಡ್ಯದ ವಿರುದ್ಧ ಸಾಕಷ್ಟು ಹೋರಾಟವನ್ನು ಮಾಡಿ ಮೌಢ್ಯಕ್ಕೆ ಜೋತು ಬಿದ್ದ ಜನರಲ್ಲಿ ಅರಿವನ್ನು ಮೂಡಿಸಿದ ಮಹಾನ್ ವ್ಯಕ್ತಿ ಎಂದು ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಮೌಢ್ಯ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ತಾಲ್ಲೂಕಿನ ಬೀರನೂರು ಗ್ರಾಮದ ರುದ್ರಭೂಮಿಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಊಟ ಸವಿದಿದ್ದು ವಿಶೇಷವಾಗಿತ್ತು.
ಇನ್ನೋರ್ವ ಅತಿಥಿಗಳಾದ ಶರಣ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ ಸಮಾಜದಲ್ಲಿ ಅಂಟಿಕೊಂಡಿರುವ ಮೌಢ್ಯ ಕಂದಾಚಾರಗಳಿಂದ ಮುಕ್ತಿಗೊಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿದ್ಧ ಬಸವ ಕಬೀರಾನಂದ ಮಹಾಸ್ವಾಮಿಗಳು ವಹಿಸಿ ಕೊಂಡಿದ್ದರು ಈ ಸಮಾರಂಭದ ವೇದಿಕೆ ಮೇಲೆ ಉಪನ್ಯಾಸಕರಾದ ಡಾ: ರವೀಂದ್ರನಾಥ್ ಹೊಸಮನಿ, ಶರಣು ಟಿ.ಬೀರನೂರ,ಹಾಗೂ ಇತರರು ಉಪಸ್ಥಿತರಿದ್ದರು.