ಮಹಾಕನ್ನಡಿಗರಿಗಾಗಿ ಮಹಾರಾಷ್ಟ್ರ ಸರಕಾರ “ಕನ್ನಡ ಅಭಿವೃದ್ಧಿ ಪ್ರಾಧಿಕಾರ” ರಚಿಸಲಿ

0
21

ಸೊಲ್ಲಾಪುರ : ಮಹಾರಾಷ್ಟ್ರಲ್ಲಿರುವ ಕನ್ನಡಿಗರ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಸರ್ಕಾರ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ರಚಿಸಬೇಕೆಂದು ಆದರ್ಶ ಕನ್ನಡ ಬಳಗದ ವತಿಯಿಂದ ಅಕ್ಕಲಕೋಟ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಇತ್ತಿಚೆಗೆ ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ರಚಿಸುವ ಮೂಲಕ ೫೦ ಕೋಟಿ ರೂ. ಅನುದಾನ ಮಂಜೂರ ಮಾಡಿದ್ದಾರೆ. ಇದರಿಂದ ಕರ್ನಾಟಕದಲ್ಲಿರುವ ಮರಾಠಿಗರಿಗೆ ತುಂಬಾ ಅನುಕೂಲವಾಗಲಿದ್ದು ಅವರ ಭವಿಷ್ಯ ಇನ್ನೂ ಉಜ್ವಲವಾಗಲಿದೆ.

Contact Your\'s Advertisement; 9902492681

ಅದರಂತೆ ಮಹಾರಾಷ್ಟ್ರದ ಮುಂಬಯಿ, ಪುಣೆ, ಠಾಣೆ ಸೊಲ್ಲಾಪುರ, ಕೊಲ್ಲಾಪುರ ಹಾಗೂ ಸಾಂಗಲಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ಕನ್ನಡಿಗರಿದ್ದಾರೆ. ಆದ್ದರಿಂದ ಕರ್ನಾಟಕ ಸರಕಾರದಂತೆ ಮಹಾರಾಷ್ಟ್ರ ಸರಕಾರವು ಕೂಡ ಮಹಾರಾಷ್ಟ್ರಲ್ಲಿರುವ ಕನ್ನಡಿಗರ ಅಭಿವೃದ್ಧಿಗಾಗಿ ‘‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ರಚಿಸುವ ಮೂಲಕ ಇಲ್ಲಿನ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಿಂದ ಇಲ್ಲಿನ ಕನ್ನಡಿಗರಿಗೆ ಆತ್ಮಬಲ ಹೆಚ್ಚಾಗಲಿದ್ದು ಕನ್ನಡಿಗರ ಭವಿಷ್ಯ ಉಜ್ವಲವಾಗಲಿದೆ.

ಆದ್ದರಿಂದ ಕೂಡಲೇ ಮಹಾರಾಷ್ಟ್ರ ಸರಕಾರ ‘ಮಹಾರಾಷ್ಟ್ರ ಕನ್ನಡಿಗರ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿ ಉದ್ಧವ ಠಾಕರೆ ಅವರು ‘‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ರಚಿಸುವಂತೆ ಆದರ್ಶ ಕನ್ನಡ ಬಳಗದ ವತಿಯಿಂದ ಅಕ್ಕಲಕೋಟ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ.

ಕರ್ನಾಟಕದಲ್ಲಿ ಮರಾಠಿಗರಿಗೆ ಒಂದು ನ್ಯಾಯ ಆದರೆ ಮಹಾರಾಷ್ಟçದಲ್ಲಿ ಕನ್ನಡಿಗರಿಗೆ ಒಂದು ನ್ಯಾಯ. ಹೀಗಾಗಿ ಕರ್ನಾಟಕದಂತೆ ಮಹಾರಾಷ್ಟ್ರದಲ್ಲಿಯೂ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ರಚಿಸುವ ಮೂಲಕ ಇಲ್ಲಿನ ಕನ್ನಡಿಗರಿಗೂ ನ್ಯಾಯ ಒದಗಿಸಲು ಮಾನ್ಯ ಮುಖ್ಯಮಂತ್ರಿ ಉದ್ಧವ ಠಾಕರೆ ಅವರು ಮುಂದಾಗಬೇಕು. ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಹಾರಾಷ್ಟ್ರ ಸರಕಾರದೊಂದಿಗೆ ಚರ್ಚಿಸಿ ಕೂಡಲೆ ಮಹಾರಾಷ್ಟ್ರದ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. -ಮಲಿಕಜಾನ್ ಶೇಖ, ಅಧ್ಯಕ್ಷರು, ಆದರ್ಶ ಕನ್ನಡ ಬಳಗ, ಅಕ್ಕಲಕೋಟ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here