ಕಲಬುರಗಿ: ವಿಶ್ವಕ್ಕೆ 12ನೇ ಶತಮಾನದ ವಿಶ್ವ ಗುರು ಬಸವಣ್ಣನವರ ಪರಿಕಲ್ಪನೆಯ ಅನುಭವ ಮಂಟಪವೆ ಪ್ರಜಾಪ್ರಭುತ್ವದ ಅಡಿಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಸ್ವಾಗತಾರ್ಹವಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
ಹೊಸದಾಗಿ ನಿರ್ಮಿಸುತ್ತಿರುವ ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೋದಿಯವರು, ಮ್ಯಾಗ್ನ ಕಾರ್ಟ’ಕ್ಕಿಂತ ಮೋದಲು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದಿರುವ ಕೀರ್ತಿ 12ನೇ ಶತಮಾನದ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದಿರುವ ಪ್ರಧಾನಿಯವರ ಹೇಳಿಕೆ ಕರ್ನಾಟಕದ ವಚನ ಸಾಹಿತ್ಯ ಚಳುವಳಿ ಹಾಗೂ ಸಮ ಸಮಾಜದ ಪರಿಕಲ್ಪನೆಯು ಅನುಭವ ಮಂಟಪದ ಮೂಲಕ ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ಯರೂಪಕ್ಕೆ ಬಂದದ್ದು ಭಾರತ ದೇಶದಲ್ಲಿ ಎನ್ನುವುದು ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಸಂಗತಿಯಾಗಿದೆ ಎಂದು ಹೇಳಿರುವುದು ನಿತ್ಯಸತ್ಯ ಎಂದು ಅಂಬಾರಾಯ ಅಷ್ಠಗಿ ಹೇಳಿದ್ದಾರೆ.