ಶಹಾಬಾದ: ಗ್ರಾಮಗಳಲ್ಲಿ ರಂಗೇರುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ

0
123

ಶಹಾಬಾದ: ಗ್ರಾಪಂ ಚುನಾವಣೆ ಹತ್ತಿರವಾದಂತೆ ಗ್ರಾಮಗಳಲ್ಲಿ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ತಾಲೂಕಿನ ನಾಲ್ಕು ಗ್ರಾಪಂಯ ಗ್ರಾಮಗಳಲ್ಲಿ ಚುನಾವಣೆ ರಂಗೇರುತ್ತಿದ್ದು, ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕಾರ್ಯವೂ ಭರದಿಂದ ನಡೆಯುತ್ತಿದೆ.

ತಾಲೂಕಿನ ಹೊನಗುಂಟಾ, ತೊನಸನಗಳ್ಳಿ(ಎಸ್), ಭಂಕೂರ, ಮರತೂರ ಗ್ರಾಪಂಯ 90 ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದ್ದು, ಅಭ್ಯರ್ಥಿಗಳು ತಮಗೆ ಮತ ನೀಡುವಂತೆ ಮತದಾರರ ಮನವೊಲಿಕೆಗೆ ನಿರತರಾಗಿದ್ದಾರೆ. ಒಂದೇ ವಾರ್ಡನ ಅಭ್ಯರ್ಥಿ ಹಾಗೂ ಎದುರಾಳಿ ಅಭ್ಯರ್ಥಿಗಳನ್ನು ನಾಮಪತ್ರ ಹಿಂತೆಗೆದುಕೊಳ್ಳುವತ್ತ ಮನವೊಲಿಕೆ ಕಾರ್ಯವೂ ಭರದಿಂದ ಸಾಗುತ್ತಿದೆ.

Contact Your\'s Advertisement; 9902492681

ಗ್ರಾಪಂ ಚುನಾವಣೆ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೇ ಚುನಾವಣೆ ನಡೆಯುವುದಿಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವ ವಿಚಾರವಾದರೂ ಪರೋಕ್ಷವಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷ ಚುನಾವಣೆ ಅಖಾಡಕ್ಕೆ ಇಳಿದಿವೆ.ಚುನಾವಣೆಯನ್ನು ಎರಡು ಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.ರಾಜ್ಯದ್ಲಿ ಬಿಜೆಪಿ ಅಸ್ಥಿತ್ವದಲ್ಲಿದ್ದು, ಈಗಾಗಲೇ ಎಲ್ಲಾ ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗಿದೆ.ಈಗ ಗ್ರಾಪಂ ಚುನಾವಣೆಯಲ್ಲೂ ಗೆದ್ದು ತನ್ನ ಪ್ರಾಬಲ್ಯವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ.ಇತ್ತ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ತನ್ನ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಕಾರ್ಯಪ್ರವೃತ್ತರಾಗಿದ್ದು, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ಮತದಾರರ ಸೆಳೆಯುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.ಇತ್ತ ಎರಡು ಪಕ್ಷಗಳ ಅಭ್ಯರ್ಥಿಗಳು ವಿರುದ್ಧ ಪಕ್ಷೇತರರು ಸವಾಲೊಡ್ಡಿದ್ದಾರೆ.ಇದರಿಂದ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದ್ದು, ಅಭ್ಯರ್ಥಿಗಳ ಗೆಲುವಿಗೂ ತಲೆನೋವಾಗಿ ಪರಿಣಮಿಸಿದೆ.
ಮತದಾರರಿಗೆ ಆಮಿಷ ಒಡ್ಡುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿವೆ.ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಒಟ್ಟಾರೆಯಾಗಿ ಕೋವಿಡ್ -19 ನಡುವೆಯೂ ಗ್ರಾಮ ಪಂಚಾಯತ್ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಈಗಾಗಲೇ ತಾಲೂಕಾಢಳಿತ ಗ್ರಾಮ ಪಂಚಾಯತ್ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ನಾಮಪತ್ರಿಕೆ ಸಲ್ಲಿಕೆ ಶುಕ್ರವಾರ ಕೊನೆಯ ದಿನಾಂಕವಾಗಿದ್ದು, 4 ಗ್ರಾಪಂಯ 90 ಕ್ಷೇತ್ರಗಳಿಗೆ 312 ನಾಮಪತ್ರ ಸಲ್ಲಿಕೆಯಾಗಿವೆ.
ಭಂಕೂರ ಗ್ರಾಪಂಯಲ್ಲಿ ಒಟ್ಟು 31 ಸ್ಥಾನಗಳಿಗೆ 88 ನಾಮಪತ್ರ ಸಲ್ಲಿಕೆಯಾಗಿವೆ. ತೊನಸನಹಳ್ಳಿ(ಎಸ್) ಗ್ರಾಪಂಯ ಒಟ್ಟು 22 ಸ್ಥಾನಗಳಿಗೆ 72 ನಾಮಪತ್ರ, ಮರತೂರ ಗ್ರಾಪಂ ಒಟ್ಟು 20 ಸ್ಥಾನಗಳಿಗೆ 70 ನಾಮಪತ್ರ ಹಾಗೂ ಹೊನಗುಂಟಾ ಗ್ರಾಪಂಯ 17 ಸ್ಥಾನಗಳಿಗೆ 82 ನಾಮಪತ್ರ ಸಲ್ಲಿಕೆಯಾಗಿವೆ. ತಾಲೂಕಿನ ನಾಲ್ಕು ಗ್ರಾಪಂ ಒಳಗೊಂಡಂತೆ 90 ಸ್ಥಾನಗಳಿಗೆ 312 ನಾಮಪತ್ರ ಸಲ್ಲಿಕೆಯಾಗಿವೆ. ಡಿಸೆಂಬರ್ 12 ರಂದು ನಾಮಪತ್ರ ಪರಿಶೀಲನೆ, ಡಿಸೆಂಬರ್ 14 ರಂದು ನಾಮಪತ್ರ ಹಿಂತೆಗೆದುಕೊಳ್ಳುವುದು ಮತ್ತು ಅಂತಿಮ ಕಣದಲ್ಲಿರುವ ಅಭ್ಯಥರ್ಿಗಳ ಪಟ್ಟಿ ಹೊರಬೀಳುತ್ತದೆ ಎಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here