ಕಲಬುರಗಿ: ನಗರದ ಅನನ್ಯ ಪದವಿ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಉದ್ಘಾಟನಾ ಸಮಾರಂಭ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಡಾ.ಸಂಗಮೇಶ ಹಿರೇಮಠ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ನೆರೆದ ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ಆದ ಕೆವು ಘಟನೆಗಳನ್ನು ಹೇಳುತ್ತಾ ಜೀವನದಲ್ಲಿ ನೊಂದ ಸ್ವಾಭಿಮಾನಿ ಮಹಿಳೆ ಮರಿಯಮ್ಮಳ ರೋಚಕ ಕಥೆಯನ್ನು ಹೇಳಿ ತಾವು ಭಾವುಕರಾಗುವುದಲ್ಲದೆ, ಇಂಥಹ ಬಡ ಪರಿಸ್ಥಿತಿಯಲ್ಲಿರುವ ಮಹಿಳೆಗೆ ಸಹಾಯ ಮಾಡಲಾಗಲಿಲ್ಲ ಎಂದು ವ್ಯಥೆ ಪಟ್ಟು ಎಲ್ಲರನ್ನು ಭಾವುಕರನ್ನಾಗಿ ಮಾಡಿದರು. ಅದೇ ರೀತಿ ಇನ್ನೋರ್ವ ವ್ಯಕ್ತಿ ನಾನ್ ಸರ್ ಸೈಬಣ್ಣ ಎಂದು ಕರೆ ಮಾಡುವ ವ್ಯಕ್ತಿಯ ಬಗ್ಗೆ ಹೇಳಿ ಹಾಸ್ಯ ಚಟಾಕಿ ಮಾಡಿದರು. ಅಂದರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರು ಸ್ವಾಭಿಮಾನ ಜೀವನ ಮಾಡಬೇಕು. ಹಾಗೆಯೇ ವಿದ್ಯೆಯನ್ನು ಕೇವಲ ಕಾಲಹರಣ ಮಾಡಲು ಉಪಯೋಗಿಸದೆ ಅದನ್ನು ಹಂಬಲವನ್ನಾಗಿ ಮಾಡಿಕೊಳ್ಳಬೇಕು. ಹಾಗೆಯೇ ಪ್ರತಿಯೊಬ್ಬರು ನನ್ನ ಸಂಚಾರಿ ದೂರವಾಣಿಗೆ ಕರೆ ಮಾಡಿದರು ನಿಮ್ಮಗಳ ಸಹಾಯಕ್ಕೆ ಸದಾ ಸಿದ್ದ ಎಂದು ಹೇಳಿದರು.
ಯುವ ಭಾರತ್ ಶಿಕ್ಷಣ ಪ್ರತಿಷ್ಠಾನ ರಾಜ್ಯಾಧ್ಯಕ್ಷ ಹಾಗೂ ಇಂಟಿರಿಯರ್ ಡಿಜೈನರ್ ಮಂಗಳೂರು ವಿಶ್ವವಿದ್ಯಾಲಯ ಬಿಒಇ ಅಧ್ಯಕ್ಷ ಅಭಿಷೇಕ ಸುವರ್ಣ ಅವರು ಮಾತನಾಡಿ ಶಿಕ್ಷಣವನ್ನು ಕೇವಲ ಒಂದೇ ರೀತಿಯಾಗಿ ಓದದೇ ಅದರಲ್ಲಿ ಅನೇಕ ದಾರಿಗಳುಂಟು ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದರಲ್ಲದೆ, ಅದಕ್ಕೆಂದೆ ಇರುವ ಬಿ.ಎಸ್‌ಸಿ, ಎಂ.ಎಸ್‌ಸಿ, ಒಳಾಂಗಣ ವಿನ್ಯಾಸ ಮತ್ತು ಅಲಂಕಾರ, ಅನಿಮೇಷನ್, ಫ್ಯಾಷನ್ ಡಿಸೈನ್, ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ರಿಟೇಲ್ ಮಾರ್ಕೆಟಿಂಗ್ ಹವಾರು ಕೋರ್ಸುಗಳಿದ್ದು ಅವುಗಳ ಸದುಪಯೋಗವನ್ನು ಪಡೆಯಿರಿ ಎಂದರು. ವಂಶಪರಂಪರೆಯಾಗಿ ಬಂದ ದಾರಿಯನ್ನೇ ಹಿಡಿಯದೇ ಜೀವನಕ್ಕೆ ಬೇಕಾಗುವ ದಾರಿಗಳನ್ನು ಸಂಚಾರಿ ದೂರವಾಣಿಯಲ್ಲಿ ಹುಡುಕಿ ಸದುಪಯೋಗ ಮಾಡಿಕೊಳ್ಳಿ ಎಂದರು.
ಯುವ ಭಾರತಾ ವಿದ್ಯಾ ಫೌಂಡೇಶನ್ ಮೂಲಕ ಬಾಲ್ಯ ವಿವಾಹ, ಪದ್ಧತಿ ಬಡ ಮಕ್ಕಳಿಗೆ ವಿದ್ಯೆಕೊಡಿಸುವ ಬಗ್ಗೆ ಸಂಬಂದ ಪಟ್ಟ ಕಾರ್ಯಕ್ರಮಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ ಬಗ್ಗೆ ತಿಳಿಹೇಳುತ್ತಾ ಬಂದಿರುವುದನ್ನು ಸಭೆಯೊಂದಿಗೆ ಹಂಚಿಕೊಂಡರು. ಇಂದಿನ ಮಕ್ಕಳಿಗೆ ಮುದ್ರಾಯೋಜನೆ, ಶಿಕ್ಷಣ ಸಾಲಗೆ ಬೇಕಾದ ವಿದ್ಯಾಲಕ್ಷ್ಮಿ ಸಾಲಕ್ಕ ಅರ್ಜಿಯನ್ನು ಹಾಕಿದಾಗ ಯಾವುದೇ ಬ್ಯಾಂಕಿನ ಮ್ಯಾನೆಜರ್ ಯಾವುದೇ ತೊಂದರೆ ಹಾಗೂ ಆಸ್ತಿಯನ್ನು ಪಡೆಯದೇ ನೇರವಾಗಿ ಕೊಡುತ್ತಾರೆ, ಇಂತಹ ಅವಕಾಶದ ಸದುದ್ದೇಶ ಪಡೆದುಕೊಳ್ಳಿ ಎಂದು ಹೇಳಿದರು. ಹಾಗೆಯೇ ಅನನ್ಯ ಪದವಿ ವಿದ್ಯಾಲಯದ ಪ್ರಾಂಶುಪಾಲರ ಬಗ್ಗೆ ನಲುಮೆಯ ಮಾತುಗಳನ್ನು ಹೇಳಿ ಎಲ್ಲರಿಗೂ ಮುಂದಿನ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಕೆಎಸ್‌ಒಯುದಲ್ಲಿ ಪ್ರವೇಶ ಪಡೆಯಿರಿ ಎಂದು ಹೆಳಿದರು.
ವಿದ್ಯಾಲಯದಲ್ಲಿ ಅಧಕ್ಷ್ಷೆ ಸುಷ್ಮಾವತಿ ಎಸ್. ಪೂಜಾರಿ ಹೊನ್ನಗೆದ್ದೆ ಅವರು ಮಾತನಾಡಿ ಇಂದಿನ ಮಕ್ಕಳಲ್ಲಿ ಸಭ್ಯತೆ, ಸಂಸ್ಕಾರ ಮಾಯವಾಗುತ್ತಿದೆ. ಕೇವಲ ಸಂಚಾರಿ ದೂರವಾಣಿಯನ್ನು ಕೇವಲ ದುರುದ್ದೇಶಕ್ಕೆ ಉಪಯೋಗಿಸದೇ ಸದುದ್ದೇಶಕ್ಕೆ ಬಳಸಿ. ಎಂದು ಎಲ್ಲರಲ್ಲೂ ಕೇಳಿಕೊಂಡರು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶರಣು ಬಿ.ಹೂನ್ನಗೆದ್ದೆ, ಶರ ವಿಜಯಲಕ್ಷ್ಮಿ ಸೋಮಶೇಖರ ಹಂಚಿನಾಳ, ಶಾಂತಲಾ.ಎಮ್, ಸುಜಾತಾ, ಪ್ರಾಧ್ಯಾಪಕ ಸುಧಾ, ಶಾಂತಲಾ ಎಮ್. ನಂದರಗಿ, ಶೈಲಜಾ, .ಭವಾನಿ, ವಿದ್ಯಾಲಯದ ಸಹದ್ಯೋಗಿಗಳಾದ ಅಭಿಲಾಷ, ಸುಜಾತಾ ಹಾಗೂ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.