ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ನಡೆದಿರುವ ಕಳಪೆ ರಸ್ತೆ ಕಾಮಗಾರಿಯ ಬಗ್ಗೆ ತನಿಖೆಕೈಗೊಂಡು ತಪ್ಪಿತಸ್ತರ ವಿರುದ್ದಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವೀರಕನ್ನಡಿಗರ ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ಕೈಗೊಳ್ಳ ಲಾಯಿತು.
ನಗರದ ಪಂಚಾಯತರಾಜ್ ಇಂಜನಿಯರಿಂಗ ವಿಭಾಗದ ಸಹಾಯಕ ಅಭಿಯಂತರ ಕಚೇರಿ ಎದರು ಪ್ರತಿ ಭಟನೆ ಕೈಗೊಂಡ ವೀಕಸೇ ಕಾರ್ಯಕರ್ತರು, ಜಿಲ್ಲೆಯ ಕಾಳಗಿಯಿಂದ ಭರತನೂರ ಕ್ರಾಸ ವರೆಗಿನ ರ ಸ್ತೆ ಡಾಂಬರಿಕರಣ ಕಾಮಗಾರ ಅತ್ಯಂತ ಕಳಪೆಮಟ್ಟದಿಂದ ಕೂಡಿದ್ದು, ಈರಸ್ತೆಯ ಗುಣಮಟ್ಟವನ್ನು ಪರೀಕ್ಷಿಸಲು ಮೂರನೆ ತಂಡಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಕಾಳಗಿ ತಾಲೂಕಿನ ಕಾಗಳಿಯ ರಾಜಾಪೂರ ಕ್ರಾಸ್ ವರೆಗಿನ ೨.೫೦ ಕಿ.ಮೀ ರಸ್ತೆ ಮತ್ತು ಟೆಂಗಳಿ ಗ್ರಾಮದ ೧.೫೦ ಕಿ.ಮೀ.ರ ಸ್ತೆ ಈ ಎರಡು ರ ಸ್ತೆ ಕಾಮಗಾರಿಗಳು ಗುಣಮಟ್ಟವನ್ನು ಕಾಪಾಡದೇ ಕಳಪೆಮಟ್ಟದಲ್ಲಿ ಮುಗಿಸಲಾಗಿದೆ.
೫ ಕೋಟಿ ರೂ.ಮೌಲ್ಯದ ಈ ರಸ್ತೆ ಕಾಮಗಾರಿಯ ಹಣ ದುರುಪಯೋಗ ಆಗುವುದನ್ನು ತಡೆಯಲು ಗುಣಮಟ್ಟದ ಕುರಿತು ತನಿಖೆ ಕೈಗೊಳ್ಳ ಬೇಕು, ಗುತ್ತಿಗೆದಾರರಿಗೆ ಬಿಲ್ ಹಣ ಬಿಡುಗಡೆ ಮಾಡದೇ ತೆಡೆಹಿಡಿಯ ಬೇಕು ತಪ್ಪಿತ ಸ್ತರೆಂದು ಕಂಡುಬಂದಲ್ಲಿ ಅಧಿಕಾರಿಗಳ ಹಾಗು ಗುತ್ತಿಗೆದಾರರ ವಿರುದ್ದ ಕ್ರಮಕೈಗೊಳ್ಳ ಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ವೀಕಸೇ ಸಂಸ್ಥಾಪಕ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಅವರು, ಪಂಚಾಯತರಾಜ್ ಸಹಾಯಕ ಅಭಿಯಂತರರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರವಿ ಒಂಟಿ, ಶಿವಾಜಿ ಚವಾಣ, ಅನಿಲ ತಳವಾರ, ಸಂಜನಾ ಮಂಗಳಮುಖಿ, ರಾಣಿ ಮಂಗಳಮುಖಿ, ಪೂಜಾ ಮಂಗಳಮುಖಿ, ಶಿಥಲ ಮಂಗಳಮುಖಿ, ಶ್ರಾವಣಕುಮಾರ, ಶಿವಕುಮಾರ ದೇವರಮನಿ, ಪ್ರವೀನಪವಾರ,ರಾಹುಲ ರಾಠೋಡ, ಸಿದ್ದುಕಂದಗಲ, ಅಜಯ ಅಡೆ, ರಿಷಿ ವಾಡೆಕರ, ಅವಿನಾಶ ಮುಲಗೆ, ಪ್ರಶಾಂತ ಬಾಚನಳ್ಳಿ, ಹಣಮಂತ ಬಜಂತ್ರಿ, ಶಿವಾನಂದ ಚಿಕ್ಕಾಣಿ, ರೆಹಮಾನ ಉಪಾಧ್ಯ, ಬೇತಾಬ ಉಪಾಧ್ಯ, ನಯಾ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.