ರೈತ ವಿರೋಧಿ ಕಾಯ್ದೆಗಳು ಹಿಂಪಡೆಯಲು ಒತ್ತಾಯಿಸಿ ಕಲಬುರಗಿ ಧರಣಿ ಸತ್ಯಗ್ರಹ 3ನೇ ದಿನಕ್ಕೆ

0
100

ಕಲಬುರಗಿ: ಜಿಲ್ಲೆಯ ಜಗತ್ ವೃತದಲ್ಲಿ ರೈತ ಸಂಘಟನೆಗಳು ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಕೇಂದ್ರ ಮತ್ತು ರಾಜ್ಯ ಸರಕಾರ ರೈತ ಹಾಗೂ ಕೃಷಿ ವಿರೋಧಿ ಮಸೂದೆಗಳು ವಾಪಸ್ ಪಡೆಯುಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನಾ ಧರಣಿ ಸತ್ಯಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ಹೋರಾಟಗಾರ್ತಿ ಕೆ ನೀಲಾ ನೀಲಾ ಅವರು ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉದ್ಯೇಮಿಗಳಾದ ಅಂಬಾನಿ ಹಾಗೂ ಅದಾನಿ ಮುಖಕ್ಕೆ ಕಪ್ಪು ಶಾಹಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ರೈತ ಹಾಗೂ ಜನ ವಿರೋಧಿ ಮಸೂದೆಗಳನ್ನು ಕೂಡಲೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಕೃಷಿ ವಿರೋಧಿ ಕಾಯ್ದೆಗಳು ಜಾರಿಗೊಳಿಸಿ ದೇಶದ ಕೃಷಿ ಕ್ಷೇತ್ರವನ್ನು ಉದ್ಯೇಮಿಗಳಿಗೆ ಅನುಕೂಲ ಕಲ್ಪಿಸಿಕುಡುವಂತಹ ಶಬ್ದಗಳ ಲೇವಡಿಯ ಮೂಲಕ ದೇಶದ ಜನರಿಗೆ ಮಂಕು ಯರಚಲು ಯತ್ನಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಜನ ವಿರೋಧಿ ಕಾನೂನುಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಲ್ತಾಫ್ ಹುಸೇನ ಇನಾಮದಾರ, ಶಿರಾಜ ಶಾಬ್ದಿ, ಅಸಗರ ಹುಸೇನ್, ಶೇಖ  ಸೈಫನ್, ಗುಲಾಮ ಶಬ್ಬಿರ ಅವರು ಇಂದು ಉಪವಾಸ  ಸತ್ಯಾಗ್ರಹ ಕೈಗೊಂಡರು. ಎಐಡಿಡಬ್ಲ್ಯುಎ  ಸಂಘಟನೆಯ ಕೆ.ನೀಲಾ  ಸೇರಿದಂತೆ ರೈತಪರ ಸಂಘಟನೆಗಳ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here