ಆಳಂದ: ಕಾಯಕಯೋಗಿ, ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ಪ್ರೇಮಿಗಳು ಹಾಗೂ ಶತಾಯುಷಿಗಳಾಗಿದ್ದ ದಿ. ರುಕ್ಮಯ್ಯ ಸಾಬಯ್ಯ ಗುತ್ತೇದಾರ ಅವರ ೮ನೇ ಪುಣ್ಯಸ್ಮರಣೆ, ರೈತ ದಿನಾಚಾರಣೆ ಮತ್ತು ಧರ್ಮಸಭೆ ಕಾರ್ಯಕ್ರಮ ೨೩ನೇ ಡಿಸೆಂಬರ್ ಬೆಳಿಗ್ಗೆ ೧೧ ಗಂಟೆಗೆ ಆಳಂದ ತಾಲೂಕಿನ ತಡಕಲ ಗ್ರಾಮದಲ್ಲಿ ಜರುಗಲಿದೆ.
ನಂದಗಾಂವದ ರಾಜಶೇಖರ ಮಹಾಸ್ವಾಮೀಜಿ, ಮುತ್ಯಾನ ಬಬಲಾದನ ಗುರುಪಾದಲಿಂಗ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಾರಕೂಡನ ಚೆನ್ನವೀರ ಶಿವಾಚಾರ್ಯರು, ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಖಜೂರಿಯ ಮುರುಘೇಂದ್ರ ಸ್ವಾಮೀಜಿ, ಮಾದನಹಿಪ್ಪರ್ಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಶಾಂತವೀರ ಶಿವಾಚಾರ್ಯರು, ಚಿಣಮಗೇರಿಯ ವೀರಮಹಾಂತ ಶಿವಾಚಾರ್ಯರು, ಯಳಸಂಗಿಯ ಪರಮಾನಂದ ಸ್ವಾಮೀಜಿ, ಕೇಸರ ಜವಳಗಾದ ವೀರಂತೇಶ್ವರ ಸ್ವಾಮೀಜಿ, ಬಂಗರಗಾದ ಗುರುಲಿಂಗ ಶಿವಾಚಾರ್ಯರು, ಕಿಣ್ಣಿಸುಲ್ತಾನದ ಶಿವಶಾಂತಲಿಂಗ ಶಿವಾಚಾರ್ಯರು, ತಡಕಲನ ಸಿದ್ಧಮಲ್ಲ ಶಿವಾಚಾರ್ಯರು ಉಪಸ್ಥಿತರಿರುವರು.
ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಭಾಸ್ಕರರಾವ ಪಾಟೀಲ(ಪೇರೆ) ಇವರಿಂದ ಗ್ರಾಮಾಭಿವೃದ್ಧಿ ಕುರಿತು ವಿಶೇಷ ಉಪನ್ಯಾಸ ಜರುಗಲಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.