ಸುರಪುರ: ನಗರದಲ್ಲಿನ ಅನೇಕ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ಆಗ್ರಹಿಸಿ ತಾಲೂಕು ಸವಿತಾ ಸಮಾಜ ಸಂಘದ ಮುಖಂಡರು ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿ ಮತ್ತು ಉಪಾಧ್ಯಕ್ಷ ಮಹೇಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ನಂತರ ಬಜೆಟ್ ಸಲಹಾ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಸವಿತಾ ಸಮಾಜದ ಮುಖಂಡರು,ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ,ನಗರದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಜನರು ಪರದಾಡುತ್ತಾರೆ,ಚರಂಡಿಗಳಲ್ಲಿ ಊಳು ತುಂಬಿ ದುರ್ನಾತ ಬೀರುತ್ತಿವೆ,ಇನ್ನು ನಗರಸಭೆ ಕಚೇರಿಯಲ್ಲಿ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸುವ ಮೂಲಕ ಸಿಬ್ಬಂದಿಯ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಬರುವಂತೆ ಕ್ರಮ ಕೈಗೊಳ್ಳಬೇಕು.
ನಗರದ ಅನೇಕ ಏರಿಯಾಗಳಲ್ಲಿ ಹಗಲೊತ್ತಿನಲ್ಲೂ ಬೀದಿ ದೀಪಗಳು ಉರಿಯುತ್ತವೆ,ಇನ್ನು ಕೆಲ ಕಡೆಗಳಲ್ಲಿ ಬೀದಿ ದೀಪಗಳಿಲ್ಲದೆ ಸಂಜೆಯಾದರೆ ರಸ್ತೆಗಳು ಕತ್ತಲು ತುಂಬಿಕೊಳ್ಳುತ್ತವೆ ಇಂತಹ ಅನೇಕ ಮೂಲಕ ಸೌಕರ್ಯಗಳ ಕೊರತೆ ನಗರದಲ್ಲಿ ಎದ್ದು ಕಾಣುತ್ತಿದ್ದ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್ ಹಾಗು ಎಲ್ಲಾ ಸದಸ್ಯರುಗಳಿದ್ದರು ಅಲ್ಲದೆ ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಚಿನ್ನಾಕಾರ ಕಾರ್ಯದರ್ಶಿ ರಾಘವೇಂದ್ರ ಮುಂದಿನಮನಿ ಬಾಲರಾಜ ಚಿನ್ನಾಕಾರ ಸೇರಿದಂತೆ ಅನೇಕರಿದ್ದರು.