ಸುರಪುರ: ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಮನೋಶಾಂತ್ ಮಾತನಾಡಿ,ಯೇಶು ಕ್ರಿಸ್ತನು ಪಾಪದಿಂದ ನಮ್ಮನ್ನು ಬಿಡುಗಡೆ ಮಾಡುವುದಕ್ಕೆ ಈ ಲೋಕಕ್ಕೆ ಬಂದನು,ಯೇಸು ಕ್ರಿಸ್ತನು ಅದ್ಭುತ ಸ್ವರೂಪನು ಆಲೋಚನಾ ಕರ್ತನು ಸಮಾಧಾನದ ಪ್ರಭುವು ಆಅಗಿದ್ದನು.ಯೇಸು ಕ್ರಿಸ್ತನು ಗೋದಲಿಯಲ್ಲಿ ಜನಸಿದಾಗ ದೇವದೂತರರು ಕುರುಬರಿಗೆ ಸಂದೇಶ ನೀಡಿದರು,ಕುರಿಕಾಯುವ ಕುರುಬರು ತಮ್ಮ ಕಾಣಿಕೆಗಳೊಡನೆ ಅವರು ಹೋದರು ಯೇಸು ಕ್ರಿಸ್ತನು ಬಿಡುಗಡೆ ಸಂಕೇತವಾಗಿದ್ದಾನೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಮೇಣದ ಬತ್ತಿ ಬೆಳಗಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಶಂಕರ ನಾಯಕ, ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್, ಉಸ್ತಾದ ವಜಾಹತ್ ಹುಸೇನ್, ಶೋಭಾ ಮನೋಜ್, ಶಾಂತ್ ಪಾಸ್ಟರ್, ಧನರಾಜ್ ಶ್ಯಾಮುವಲ್, ಮ್ಯಾಥ್ಯೂ ಜಾನವೆಸ್ಲಿ, ಜಯಪ್ಪ, ವಸಂತ ಕುಮಾರ, ಅಮೀತ್, ದೇವಪುತ್ರ, ರಾಜಪಾಲ, ಅನಂತಕುಮಾರ, ಧರ್ಮ ಪಾಲನಾಯ್ಕ, ಮಂಗಲರಾಜ, ರಮೇಶ, ನಿರ್ಮಲಕರ್, ಮಿಸ್ ಮೇರಿ, ಸುನೀಲ, ಶಾಂತಕುಮಾರ, ಚಂದ್ರು, ಮ್ಯಾಥ್ಯೂ ಅಲೀಸ್, ಜಾನವೆಸ್ಲಿ, ಸುಜಾತಾ, ಸುರುಮಾ, ಸೋನಾಸುಕುಮಾರಿ, ಸಾಗರಿಕಾ, ಸುಮತಿ, ಯ್ಯಾನಿ, ಜಾಕ್ಲಿನ್, ಶೋಭಾರಾಣಿ ,ಸವಿತಾ, ಅನಿತಾ, ಶ್ವೇತಾ,ಡಯಾನಾ, ಸರಿತಾ ಸೇರಿದಂತೆ ಅನೇಕರಿದ್ದರು.