ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ರೀತಿಯಲ್ಲಿ ಪ್ರತಿ ಭಟನೆ ನಡೆಸಿದರು.
ನಗರದ ಅನ್ನಪೂರ್ಣ ರಸ್ತೆಯ ಪ್ರಮುಖ ಮಾರ್ಗದ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡು ಬಿದಿಯಲ್ಲಿ ಅಡುಗೆ ಮಾಡುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಲೆ ಹಚ್ಚಿ ಚಪಾತಿ ಹಾಗೂ ಚಹಾ ತಯಾರಿ ಸುವುದರ ಮೂಲಕ ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿದರು. ಕೇಂದ್ರದ ಜನ ವಿರೋಧಿ ನೀತಿಗಳ ವಿರುದ್ಧ ನಿರಂತರ ಪ್ರತಿ ಭಟನೆ ನಡೆಸಿದ್ದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ, ಶಾಸಕಿ ಕನೀಜ್ ಫಾತಿಮಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ್, ಚಂದ್ರಿಕಾ ಪರಮೇಶ್ವರ, ವಾಣಿಶ್ರೀ ಸಗರಕರ್, ಜ್ಯೋತಿ ಮರಗೋಳ, ಮಹೇಶ್ವರಿ ವಾಲಿ, ಗೀತಾ ಮುದಗಲ್, ಸಂಗೀತಾ ಪಾಟೀಲ, ಹೈಮದಿ ಹಾಗೂ ಕಾರ್ಯಕರ್ತರು ದ್ದರು