ಬೈರಿಮರಡಿಯಲ್ಲಿ ಆಜಾದ್ ಚಂದ್ರಶೇಖರ ಯುವಕರ ಬಳಗದಿಂದ ರಾಷ್ಟ್ರೀಯ ರೈತ ದಿನಾಚರಣೆ

0
24

ಸುರಪುರ: ತಾಲೂಕಿನ ಬೈರಿಮರಡಿ ಗ್ರಾಮದಲ್ಲಿ ಆಜಾದ್ ಚಂದ್ರಶೇಖರ ಯುವಕರ ಬಳಗದ ವತಿಯಿಂದ ರಾಷ್ಟ್ರೀಯ ರೈತ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಾಯಕ ಕೃಷಿ ಅಧಿಕಾರಿ ವೆಂಕಟೇಶ ದೇಸಾಯಿ ಮಾತನಾಡಿ,ಇಂದು ಕೃಷಿಗೆ ಹೆಚ್ಚಿನ ಮಹತ್ವವಿದೆ,ಯುವಕರು ಕೇವಲ ಸರಕಾರಿ ನೌಕರಿ ಎನ್ನುವ ಬದಲು ಕೃಷಿಯತ್ತ ಒಲವು ತೋರಬೇಕೆಂದರು.ಕೃಷಿಯಿಂದ ದೊಡ್ಡ ಸಾಧನೆಯನ್ನು ಮಾಡಬಹುದು ಮತ್ತು ಆಧುನಿಕ ಕೃಷಿಯ ಮೂಲಕ ಉತ್ತಮ ಲಾಭ ಪಡೆಯಲು ಸಾಧ್ಯವಿದೆ ಎಂದರು.

ಇಂದು ರೈತರಾಗಿ ವಾಣಿಜ್ಯ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಯಿಂದಾಗಿ ಹೆಚ್ಚಿನ ಲಾಭ ಗಳಿಸಬಹುದಾಗಿದೆ ಎಂದರು.ಕೃಷಿಯಲ್ಲಿ ಆಧುನಿಕತೆ ಮತ್ತು ಸಾವಯವ ಪದ್ಧತಿಯಿಂದಲೂ ಲಾಭಗಳಿಸಬಹುದಾಗಿದೆ,ಅಲ್ಲದೆ ಇಲ್ಲಿ ಯಾವುದೇ ಪದವಿಯ ಅವಶ್ಯವಿಲ್ಲ ಮುಖ್ಯವಾಗಿ ಕೃಷಿ ಇಲಾಖೆಯ ನೆರವು ಪಡೆದು ಕೃಷಿ ಮಾಡಿದರೆ ಬೇಕಾದಷ್ಟು ಲಾಭವಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ರಷ್ಮೇ ಬೆಳೆ ಬಗ್ಗೆ ಶಿವರಾಜ ಶೆಳ್ಳಗಿ ನಿಂಗಣ್ಣ ಪೂಜಾರಿ ಮತ್ತು ಪರಮೇಶ್ವರ ಕರಡಿ ಶುಂಠಿ ಬೆಳೆ ಬಗ್ಗೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಸಿಆರ್‌ಪಿ ನಿಂಗಣ್ಣ ದೇವರಗೋನಾಲ ಎಮ್‌ಕೆ ಬಾಬು ಚನ್ನಮಲ್ಲಿಕಾರ್ಜುನ ಗುಂಡಾನೂರ್ ಶರಣಪ್ಪ ಬಸಣ್ಣೋರ್ ವೇದಿಕೆ ಮೇಲಿದ್ದರು.

ಕಾರ್ಯಕ್ರಮದಲ್ಲಿ ಭಗವಂತಪ್ಪ ಬನ್ನೆಟ್ಟಿ ಮರೆಪ್ಪ ದೊಡ್ಮನಿ ಭೀಮಪ್ಪ ಪಡೆಪ್ಪನೋರ್ ಭಾಗಪ್ಪ ಯಾದವ್ ಧರ್ಮಣ್ಣ ಬನ್ನೆಟ್ಟಿ ಅಯ್ಯಳಪ್ಪ ಹುಂಡೆಕಲ್ ಭೀಮಣ್ಣ ತಿಪ್ಪನಟಿಗಿ ಯಂಕಪ್ಪ ಶಾಸ್ತ್ರಿ ಬಲಭೀಮ್ ಬಾದ್ಯಾಪುರ ಅನಿಲ್ ಬಿಳಾರ್ ಮಲ್ಲೇಶ ಯಾದವ್ ಮಹದೇವ್ ರತ್ತಾಳ ಹೊನ್ನಪ್ಪ ಸಾವಳಪಟ್ಟಿ ಶ್ರೀಕಾಂತ ವಾಡೇಕರ್ ಮಾಳಿಂಗರಾಯ ಬನ್ನೆಟ್ಟಿ ಚಂದ್ರು ರಂಗನಾಥ ದೊರೆ ಬಲಭೀಮ್ ಶೆಳ್ಳಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here