ಸೇಡಂ: ತಾಲ್ಲೂಕಿನಾದ್ಯಂತ ಇಂದು ನಡೆಯುತ್ತಿರುವ ಗ್ರಾಮ ಪಂಚಾಯಿತಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ತಾಲ್ಲೂಕಿನ ಊಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರ್ಡ್ ಸಂಖ್ಯೆ 1 ರಲ್ಲಿ ಮಾಜಿ ಸಚಿವ, ಕೆಪಿಸಿಸಿ ವಕ್ತಾರರಾದ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಅವರ ಪತ್ನಿ ಡಾ. ಭಾಗ್ಯಶ್ರೀ ಪಾಟೀಲ್ ಇಂದು ಮತದಾನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು, ರಾಜೀವ್ ಗಾಂಧಿ ಅವರ ಕನಸಿನಂತೆ ಗ್ರಾಮೀಣ ಮಟ್ಟದಲ್ಲಿ ಒಳ್ಳೆಯ ಪ್ರತಿನಿಧಿಯನ್ನು ಆಯ್ಕೆ ಮಾಡಿ ಪಂಚಾಯತ್ ರಾಜ್ ಬಲಪಡಿಸಬೇಕು. ಅಂದಾಗ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.
ಅದರಂತೆಯೂ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಸೂಕ್ತವ್ಯಕ್ತಿಯನ್ನು ಗುರುತಿಸಿ ಮತ ಚಲಾಯಿಸಬೇಕೆಂದು ಕರೆ ನೀಡಿದರ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಬಸವರಾಜ ಆರ್ ಪಾಟೀಲ್,ಸೋಮಶೇಖರ್ ಭಾಂಜಿ ,ಮಲ್ಲಯ್ಯ ಸ್ವಾಮಿ ,ಕಾಂಗ್ರೆಸ್ ನಾಯಕ ಜೈ ಭಿಮ್ , ಸಂಪತ್ ಕುಮಾರ್ ಭಾಂಜಿ,ಪ್ರಕಾಶ್ ರಾಥೋಡ್ ,ಸತೀಶ್ ಕುಮಾರ್ ಭಾಂಜಿ,ರಮೇಶ್ ಹೂಗಾರ, ಹಮೀದ್ ಮಿಯ್ಯ ಆತ್ತಾರ್, ಶರಣು ಕೋಟಾರ್ಕಿ ,ರೇವಣಸಿದ್ದಪ್ಪ್ ಚೋಂಚ್ ,ಸಂದೀಪ್ ಕುಮಾರ್ ಭಾಂಜಿ ,ಮಂಜು ಜಮಾದರ್ ,ಮಾರುತಿ ಕಟ್ಟೀಮನಿ, ಬಸವರಾಜ ಹೂಗಾರ ಮತ್ತು ಕಾರ್ಯಕರ್ತರು ಇದ್ದರು.