ಕಲಬುರಗಿ: ನಗರದ ಶ್ರೀರಾಮ ಸೇನೆ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಮಹೇಶ ಎಚ್. ಗೊಬ್ಬುರ್ ಅವರ ನೇತೃತ್ವದಲ್ಲಿ ಅಫಜಲಪೂರ ತಾಲುಕ ನೂತನ ಅಧ್ಯಕ್ಷರಾಗಿ ವಿನೋದ ಅಂಕಲಗಿ ಅವರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಿ ಆದೇಶ ಪತ್ರ ನೀಡಿದರು.
ಸೇನೆಯ ಉಪಾಧ್ಯಕ್ಷ ಸಚೀನ ಕುಮಸಿ, ಜಿಲ್ಲಾ ವಿಧ್ಯರ್ಥಿ ಘಟಕದ ಅಧ್ಯಕ್ಷ ಮಹೇಶ ಕೆಂಬಾವಿ, ವಿರೇಶ ಸುತ್ತಾರ, ಭರತ ವಾಘಮಾರೆ, ಬಸವರಾಜ ಮೇತ್ರಿ, ಚಂದ್ರಶೇಖರ ಜಮಾದಾರ, ಪ್ರಭುಲಿಂಗ ಆಲೂರ, ಸುರೇಶ ಬಾಸಗಿ, ಶಶಿಕಾಂತ ಆರ್ ದಿಕ್ಷಿತ ಇತರರಿದ್ದರು.