ಎಲ್‌ಟಿಜಿ ಇನ್ಪ್ರಾಸ್ಟ್ರಕ್ಚರ್‌ ಗೆ 11 ನೇ ಲೀಡರ್‌ಶಿಪ್‌ ಕಾಂಕ್ಲೇವ್‌ ಪ್ರಶಸ್ತಿ

0
85

ಬೆಂಗಳೂರು: ಕರ್ನಾಟಕದ ಖ್ಯಾತ ನಿರ್ಮಾಣ ಸಂಸ್ಥೆ ಎಲ್‌ಟಿಜಿ ಇನ್ಪ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಗೆ 11 ನೇ ಲೀಡರ್‌ಶಿಪ್‌ ಕಾಂಕ್ಲೇವ್‌ ಪ್ರಶಸ್ತಿ ಲಭಿಸಿದೆ.

ನೆಟ್‌ವರ್ಕ್‌ 7 ಮೀಡಿಯಾ ಗ್ರೂಪ್‌ ನೀಡುವ ಲೀಡರ್‌ಶಿಪ್‌ ಕಾಂಕ್ಲೇವ್‌ ಪ್ರಶಸ್ತಿ ಯಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಕಂಪನಿಯ ಸಾಧನೆಗಳನ್ನು ಗುರುತಿಸಿ ಇಂಡಿಯನ್‌ ಮೋಸ್ಟ್‌ ಅಡ್ಮೈರರ್ಡ್‌ & ವಾಲ್ಯೂಯೇಬಲ್‌ ಇನ್ಪ್ರಾಸ್ಟ್ರಕ್ಚರ್‌ ಕಂಪನಿ 2020 ಎನ್ನುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Contact Your\'s Advertisement; 9902492681

ಹತ್ತು ಸಂಸ್ಥೆಗಳು ಈ ಪುರಸ್ಕಾರಕ್ಕಾಗಿ ಪೈಪೋಟಿ ನಡೆಸಿದ್ದು, ವೋಟಿಂಗ್ ಮೂಲಕ ಎಲ್‍ಟಿಜಿ ಸಂಸ್ಥೆ ಗೆಲುವು ಸಾಧಿಸಿದೆ. ಇದು ಕರ್ನಾಟಕಕ್ಕೆ ಸಂದ ಗೌರವವಾಗಿದೆ. ಹಳ್ಳಿಯಿಂದ ಬಂದು ಭಾರತದ ಅತ್ಯುತ್ತಮ ಗುಣಮಟ್ಟದ ಸಂಸ್ಥೆಯಾಗಿ ಎಲ್‍ಟಿಜಿಯನ್ನು ಸಾಧನೆ ಹಾದಿಯಲ್ಲಿ ನಡೆಸಿದ ಶ್ರೀ ಎಚ್.ಪಿ. ಲಕ್ಷ್ಮಣ ಅವರ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.

ಕರ್ನಾಟಕದ ಖ್ಯಾತ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆ ಎಲ್‍ಟಿಜಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಳೆದ 2 ದಶಕದಿಂದ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ತನ್ನ ಸೃಜನಶೀಲತೆ ಮತ್ತು ಗುಣಮಟ್ಟಕ್ಕಾಗಿ ISO 9001:14001 and 45001 ಸರ್ಟಿಫಿಕೆಟ್ ಅನ್ನು ತನ್ನದಾಗಿಸಿಕೊಂಡಿದೆ.

ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್, ವೇರ್‍ಹೌಸ್, ಕೈಗಾರಿಕಾ ನಗರ, ವಸತಿ ಯೋಜನೆಗಳು, ಐಟಿ-ಬಿಟಿ ಪಾರ್ಕ್, ಕೋಲ್ಡ್ ಸ್ಟೋರೇಜ್ ಯುನಿಟ್, ಕೃಷಿ ವಲಯ ಸೇರಿದಂತೆ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಎಚ್.ಪಿ. ಲಕ್ಷ್ಮಣ ಅವರ ಸಾರಥ್ಯದಲ್ಲಿ ಎಲ್‍ಟಿಜಿ ಮೇಲಿನ ವಲಯಗಳಲ್ಲಿ ಸಾಧನೆ ಮೆರೆದಿದೆ. ಸದಾ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯನ್ನು ಗುರುತಿಸಿ ಹಲವಾರು ಪುರಸ್ಕಾರಗಳು ದೊರಕಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here