ಸುರಪುರ: ಕನ್ನಡದ ಮೇರು ನಟ ಡಾ: ವಿಷ್ಣುವರ್ಧನ್ ಅವರ ೧೧ನೇ ಪುಣ್ಯಸ್ಮರಣೆಯ ಅಂಗವಾಗಿ ತಾಲೂಕು ವಿಷ್ಣು ಸೇನಾ ಘಟಕದ ವತಿಯಿಂದ ನಗರದ ಹಳೆ ತಹಸೀಲ್ ಕಚೇರಿ ಬಳಿಯಲ್ಲಿನ ವೃತ್ತದಲ್ಲಿ ವಿಷ್ಣು ಸೇನಾ ಆಟೋ ಚಾಲಕರ ಘಟಕದ ನಾಮಫಲಕವನ್ನು ಉದ್ಘಾಟಿಸಲಾಯಿತು.
ನಾಮಫಲಕ ಅನಾವರಣಗೊಳಿಸಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಮಾತನಾಡಿ,ಕನ್ನಡದ ಬದುದೊಡ್ಡ ನಟರಲ್ಲಿ ವಿಷ್ಣುವರ್ಧನ್ ಕೂಡ ಒಬ್ಬರಾಗಿದ್ದರು,ಅವರು ನಟಿಸಿದ ಸಿನೆಮಾಗಳು ಇಂದಿಗೂ ಜನಮಾನಸದಲ್ಲಿ ಅಚ್ಚಾಗಿ ಉಳಿದಿವೆ.ಅವರು ಕೇವಲ ನಟ ಮಾತ್ರವಲ್ಲದೆ ಒಬ್ಬ ಹೃದಯವಂತ ವ್ಯಕ್ತಿಯಾಗಿದ್ದರು ಹಾಗು ಕನ್ನಡ ನಾಡು ನುಡಿಯ ವಿಷಯ ಬಂದಾಗ ಗಟ್ಟಿ ಧ್ವನಿ ಎತ್ತಿದ ಒಬ್ಬ ಕನ್ನಡದ ಹೆಮ್ಮೆಯ ಪ್ರತಿಭೆಯಾಗಿದ್ದರು ಎಂದರು.
ವಿಷ್ಣು ಸೇನಾ ಸಮಿತಿಯ ತಾಲೂಕು ಅಧ್ಯಕ್ಷ ಮಲ್ಲು ವಿಷ್ಣು ಸೇನಾ ಮಾತನಾಡಿ, ವಿಷ್ಣು ಅಪ್ಪಾಜಿಯವರ ಇಡೀ ನಾಡಿನ ನಮ್ಮಂತಹ ಲಕ್ಷಾಂತರ ಜನರ ಆರಾಧ್ಯ ನಟರಾಗಿದ್ದಾರೆ,ಅಂತಹ ಮೇರು ನಟನ ಬಗ್ಗೆ ಕೆಲವರು ಕ್ಷುಲ್ಲಕವಾಗಿ ಮಾತನಾಡಿರುವುದು ಎಲ್ಲಾ ವಿಷ್ಣು ಅಭಿಮಾನಿಗಳಿಗೆ ನೋವುಂಟು ಮಾಡಿದೆ,ಮತ್ತೊಮ್ಮೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ವಿಷ್ಣು ಸೇನೆ ಸರಿಯಾಗಿ ಉತ್ತರ ನೀಡಲಿದೆ ಎಂದರು.ಅಲ್ಲದೆ ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿಗಳು ಕೋಲ್ಗೆಟ ಬಳಿಯಲ್ಲಿನ ವಿಷ್ಣುವರ್ಧನ ಅವರ ಪುತ್ಥಳಿ ಧ್ವಂಸಗೊಳಿಸಿರುವುದು ಖಂಡನಿಯವಾಗಿದೆ,ಸರಕಾರ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಂಡು ಪುತ್ಥಳಿ ನಿರ್ಮಿಸಬೇಕೆಂದು ಆಗ್ರಹಿಸಿದರು.
ನಂತರ ಇದೇ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಾನಪ್ಪ ನಾಯಕ ಮರೆಪ್ಪ ನಾಯಕ ಸುರೇಶ ನಾಯಕ ದೇವರಾಜ ನಾಯಕ ತಿಮ್ಮಯ್ಯ ಹಾಗು ಜನಪದ ಸಾಹಿತಿ ನಿಂಗುರಾಜ ಇರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವಿಷ್ಣು ಸೇನಾ ಸಮಿತಿಯ ತಾಲೂಕು ಗೌರವಾಧ್ಯಕ್ಷ ಮೌನೇಶ ತಿಂಥಣಿ ಉಪಾಧ್ಯಕ್ಷ ರಾಮಕೃಷ್ಣ ಸಂದೀಪ್ ನಿಂಗಪ್ಪ ಕುಂಬಾರ ಚಂದ್ರು ಮಹ್ಮದ್ ಮುಬಾರಕ್ ಒಂಟಿ ಸಂಗಪ್ಪ ಸುರಪುರ ದೇವರಾಜ ಗೌಡಪ್ಪ ಮದರ್ ತೋಪಿಕ್ ಬಾಗಪ್ಪ ಬಸವರಾಜ ಸಂತೋಷ ಮಲ್ಲು ಶಿವು ಪೂಜಾರಿ ಮಹಿಮೂದ್ ಸೇರಿದಂತೆ ಅನೇಕರಿದ್ದರು.