ಸುರಪುರ: ನಗರದ ವಾರ್ಡ್ ಸಂಖ್ಯೆ ೨೯ರ ದೀವಳಗುಡ್ಡದ ಜಾಂಬವ ನಗರದಲ್ಲಿ ಶರಣ ಮಾದಾರ ಚೆನ್ನಯ್ಯನವರ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಚೆನ್ನಯ್ಯನವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಘೊಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗಾಳೆಪ್ಪ ಹಾದಿಮನಿ ಮಾತನಾಡಿ,೧೨ನೇ ಶತಮಾನದ ಬಸವ ಯುಗದಲ್ಲಿ ಪ್ರಮುಖರಾದ ಶರಣರಲ್ಲಿ ಮಾದಾರ ಚೆನ್ನಯ್ಯನವರು ಒಬ್ಬರಾಗಿದ್ದಾರೆ.ಬಸವಣ್ಣವರ ಪ್ರಿಯ ಶರಣರಲ್ಲಿ ಒಬ್ಬರಾದ ಚೆನ್ನಯ್ಯನವರನ್ನು ಅಪ್ಪನು ನಮ್ಮ ಮಾದಾರ ಚೆನ್ನಯ್ಯ ಎನ್ನುವ ಮೂಲಕ ಬಸವಣ್ಣನವರು ಎತ್ತರದ ಸ್ಥಾನದಲ್ಲಿ ಕಂಡಿದ್ದರು,ಅಲ್ಲದೆ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡ ಕಾರಣದಿಂದ ಕಲ್ಯಾಣಗೊಂಡಿತು ಎಂದು ಗೌರವದಿಂದ ನುಡಿಯುತ್ತಾರೆ.ಅಂತಹ ಮಹಾನ್ ಶರಣರಾದ ಮಾದಾರ ಚೆನ್ನಯ್ಯನವರ ಜಯಂತಿಯನ್ನು ಎಲ್ಲ ಸಮುದಾಯಗಳು ಅಭಿಮಾನದಿಂದ ಆಚರಿಸುವಂತಾಗಬೇಕು ಎಂದರು.
ಶಿಕ್ಷಣ ಪ್ರೇಮಿ ನಿಂಗಣ್ಣ ಬುಡ್ಡಾ ಮಾತನಾಡಿ,ಮಾದಾರ ಚೆನ್ನಯ್ಯನವರು ಮದ್ರಾಸಿನ ಅರಸನಲ್ಲಿ ಕುದುರೆ ಮೇಯಿಸುವ ಕಾಯಕದಲ್ಲಿದ್ದು ನಂತರ ಕಲ್ಯಾಣದ ಶರಣರ ಬಗ್ಗೆ ತಿಳಿದು ಬಸವ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ ಪ್ರಮುಖರಾದ ಚೆನ್ನಯ್ಯನವರು ಬಸವಾದಿ ಶರಣರ ಮೆಚ್ಚಿನ ಶರಣರಾಗಿದ್ದರು,ಅಂದಿನ ೧೨ನೇ ಶತಮಾನದಲ್ಲಿಯೇ ಜಾತಿ ಮತಗಳ ಕಂದಕವನ್ನು ತೊಡೆದು ಹಾಕಿದ ಬಸವಣ್ಣನವರೆ ಚೆನ್ನಯ್ಯನವರನ್ನು ಅಪ್ಪನು ಎಂದು ಅಭಿಮಾನದಿಂದ ಕರೆಯುವ ಮೂಲಕ ಚೆನ್ನಯ್ಯನವರ ವ್ಯಕ್ತಿತ್ವವನ್ನು ಜಗತ್ತಿಗೆ ತಿಳಿಸಿದ್ದಾರೆ.
ಅಂತಹ ಮಹಾನ್ ಶಿವಶರಣರಾದ ಮಾದಾರ ಚೆನ್ನಯ್ಯನವರ ಜಯಂತಿಯನ್ನು ನಾವು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ,ಎಲ್ಲರು ಬಸವಾದಿ ಶರಣರು ತಿಳಿಸಿದ ಸಮಾನತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜೆಟ್ಟೆಪ್ಪ ಸತ್ಯಂಪೇಟೆ ರಾಜು ತೊಳೆನೋರ್ ಚಂದ್ರಶೇಖರ ಹೋಮಗಾರ್ಡ್ ಚಂದು ದೊಡ್ಮನಿ ಭೀಮಣ್ಣ ದೊಡ್ಮನಿ ಚಂದ್ರಕಾಂತ ಕಟ್ಟಿಮನಿ ಪರಶುರಾಮ ಕಟ್ಟಿಮನಿ ಯಲ್ಲಪ್ಪ ಕಟ್ಟಿಮನಿ ಪರಶುರಾಮ ಅಗ್ನಿ ಹಣಮಂತ ಹಳಿಮನಿ ಸೇರಿದಂತೆ ಅನೇಕರಿದ್ದರು.