ಸುರಪುರ: ದೇಶದಲ್ಲಿ ತಿದ್ದುಪಡಿಗೊಳಿಸಿ ಜಾರಿಗೆ ತರುತ್ತಿರುವ ಕಾರ್ಮಿಕ ಕಾನೂನುಗಳು ಸಂಪೂರ್ಣ ಕಾರ್ಮಿಕರ ವಿರೋಧಿಯಾಗಿದ್ದು ಸರಕಾರ ಕೂಡಲೆ ಇದನ್ನು ಕೈಬಿಡಬೇಕು ಇಲ್ಲವಾದಲ್ಲಿ ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಉಗ್ರ ಹೋರಾಟ ನಡೆಸಲಿವೆ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸುರೇಖಾ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸ್ ನಿಲ್ದಾಣ ಬಳಿಯ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಇಂದು ನಾವು ಕಾರ್ಮಿಕ ಕಾನೂನು ಮಸೂದೆಯನ್ನು ವಿರೋಧಿಸಿ ಮಸೂದೆಯ ಪ್ರತಿಯನ್ನು ಸುಟ್ಟು ಸರಕಾರ ಕೂಡಲೆ ಈ ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದು ಮಾಡುವಂತೆ ಆಗ್ರಹಿಸುತ್ತೇವೆ ಒಂದು ವೇಳೆ ನಮ್ಮ ಮನವಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಕಾನೂನುಗಳನ್ನು ರದ್ದು ಮಾಡದಿದ್ದಲ್ಲಿ ದೇಶಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ನಂತರ ಎಲ್ಲಾ ಹೋರಾಟಗಾರರು ಕಾರ್ಮಿಕ ಕಾನೂನುಗಳ ಪ್ರತಿಯನ್ನು ಸುಡುವ ಮೂಲಕ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ನಸೀಮಾ ಮುದನೂರ ರಾಧಾಬಾಯಿ ಲಕ್ಷ್ಮೀಪುರ ವಿಜಯಲಕ್ಷ್ಮೀ ಕೆಂಭಾವಿ ಶೈನಾಜ್ ರಂಗಂಪೇಟೆ ಸಬಿಯಾ ರಂಗಂಪೇಟೆ ಪರ್ವಿನ್ ಚಂದ್ರಕಲಾ ಸೇರಿದಂತೆ ಅನೇಕರಿದ್ದರು.