ಕಲಬುರಗಿ: ಸಜ್ಜನಿಕೆ, ಔದಾರ್ಯ, ಶಾಂತತೆ ಮತ್ತು ಸೌಮ್ಯ ಪ್ರಭಾವದ ಸಾಕಾರಮೂರ್ತಿಯಾಗಿದ್ದ ದೇವ ಮಾನವ ಶ್ರೀದೇವಲ ಮಹರ್ಷಿ ಕೃತಿಯು ಚಾರಿತ್ರಿಕ ಕಥೆಗಳು ಹೊಂದಿದೆ ಎಂದು ಹಿರಿಯ ಲೇಖಕ ಹಾಗೂ ಅನುವಾದಕ ಸೂರ್ಯಕಾಂತ ಸೊನ್ನದ ಅಭಿಪ್ರಾಯಪಟ್ಟರು.
ನಗರದ ಬ್ರಹ್ಮಪುರ ಮಹಾಲಕ್ಷ್ಮೀ ಲೇಔಟ್‌ನ ದಿ ಆರ್ಟ ಇಂಟಿಗ್ರೇಶನ್ ಸೊಸೈಟಿಯಲ್ಲಿ ಕಲ್ಯಾಣ ಕರ್ನಾಟಕ ದೇವಾಂಗ ಅಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಕಾಯಕ ಜೀವಿ ಚಂದ್ರಶೇಖರ ಮಾಳಾ ರಚನೆಯ ದೇವಮಾನವ ಶ್ರೀದೇವಲ ಮಹರ್ಷಿ ಕೃತಿ ಬಿಡುಗಡೆಯಲ್ಲಿ ಕೃತಿ ಕುರಿತು ಮಾತನಾಡಿದ ಅವರು, ಪೌರಾಣಿಕ ಕಥಾರೂಪದಲ್ಲಿ ರಚಿಸಲಾದ ದೇವಲ ಮಹರ್ಷಿ ಕೃತಿಯು ಚರಿತ್ರೆಯ ಜೊತೆಗೆ ಸುಮಾರು ನಲವತ್ತು ಕವಿತೆಗಳು ಅಡಗಿವೆ ಎಂದು ಅವರು ಹೇಳಿದರು.
ಬ್ರಹ್ಮ-ಮುದುಕ, ವಿಷ್ಣು-ಯುವಕ. ಮಹೇಶ್ವರ-ಭುಕ್ಷುಕ. ಬ್ರಹ್ಮ ಆದೇಶ- ದೇವಾಂಗ ಸಮಾಜ ಸ್ಥಾಪನೆಗೆ ಕಾರ್ತಿಕ ಮಾಸದ ದ್ವಾದಸಿ ದಿನ ದೇವಲ ಮಹರ್ಷಿ ಜಯಂತ್ಯೋತ್ಸವನ್ನು ಸಮಾಜದವರು ಆಚರಿಸುತ್ತ ಬಂದಿದ್ದಾರೆ. ದೇವಲ ಮಹರ್ಷಿ ದೇವಧತ್ತಿ ಕಳಿಸಿದ ವಸ್ತ್ರಗಳನ್ನು ಬ್ರಹ್ಮ-ವಿಷ್ಣು-ಮಹೇಶ್ವರ ದೇವತೆಗಳಿಗೆಲ್ಲ ಹಂಚುತ್ತಾರೆ ಎಂದು ಅವರು ತಿಳಿಸಿದರು.
ಮಾತಾ ಗಾಯತ್ರಿ ಪೀಠ ಹಂಪಿಯಲ್ಲಿ ಹೇಗೆ ಬಂತು? ಮೊದಲ ಪೀಠಾಧಿಪತಿ ಯಾರು? ಬಾದಾಮಿಯಲ್ಲಿ ಬನಶಂಕರಿ ದೇವಾಲಯ ಹೇಗೆ ಬಂತು, ತೆಂಗಿನ ಬನದ ನಿರ್ಮಾಣ ವಿವರಣೆಯು ಕೃತಿಯಲ್ಲಿ ಗಮನಿಸಬಹುದಾಗಿದೆ ಎಂದು ಅವರು ವಿವರಿಸಿದರು.
ರಾಜ್ಯ ಹಟಗಾರ ಸಮಾಜದ ಸಂಸ್ಥಾಪಕರಾದ ಆರ್.ಸಿ.ಘಾಳೆ ಜ್ಯೋತಿ ಬೆಳಗಿಸಿ ಮಾತನಾಡಿದರು. ಅಕ್ಕಲಕೋಟ ಕೋಷ್ಟಿ ಸಮಾಜದ ಅಧ್ಯಕ್ಷೆ ಸುನಂದಾ ಅಷ್ಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಎಂ.ಎಚ್.ಬೆಳಮಗಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ವಿಶ್ವಕರ್ಮ ಏಕದಂಡಗಿ ಮಠಾಧೀಶರಾದ ಸುರೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಲೇಖಕ ಚಂದ್ರಶೇಖರ ಮಾಳಾ ಸ್ವಾಗತಿಸಿದರು. ವಿನೋದಕುಮಾರ ಜೆನೇವರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಅಂಡಗಿ ನಿರೂಪಿಸಿದರು. ಹಿರಿಯ ಸಾಹಿತಿ ರಮೇಶ ಮಾಳಾ ವಂದಿಸಿದರು. ವಿಜಯಕುಮಾರ ಜುಂಜಾ, ಶಿವಲಿಂಗಪ್ಪ ಹಳ್ಳಿ, ರಾಜು ಕೋಷ್ಟಿ ಮುಂತಾದವರಿದ್ದರು.