ಪೌಷ್ಠಿಕಾಂಶವುಳ್ಳ ಪೌಡರ್, ಹಣ್ಣು ಹಂಪಲು ವಿತರಿಸುವ ಮೂಲಕ ಹೊಸ ವರ್ಷ ಆಚರಣೆ

0
85

ಕಲಬುರಗಿ: ನೋಂದವರ ನೋವಿಗೆ ಸ್ಪಂದಿಸುವುದೇ ನಿಜವಾದ ಸಮಾಜ ಸೇವೆ ಎಂಬ ತತ್ವದಡಿಯಲ್ಲಿ ಸಾಗುತ್ತಿರುವ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಕ್ಷಯರೋಗದಿಂದ ಬಳಲುತ್ತಿರುವವರು ಮತ್ತು ಪೌರ ಕಾರ್ಮಿಕರಿಗೆ ಪೌಷ್ಠಿಕಾಂಶವುಳ್ಳ ಪೌಡರ್ ಮತ್ತು ಹಣ್ಣು ಹಂಪಲುಗಳನ್ನು ಕೊಡುವ ಮೂಲಕ ಹೊಸ ವರ್ಷವನ್ನು ವಿಶಿಷ್ಟವಾಗಿ ಸ್ವಾಗತಿಸಿದ ಪ್ರಸಂಗ ಶುಕ್ರವಾರ ನಗರದ ಬಸವೇಶ್ವರ ಪುತ್ಥಳ್ಳಿ ಬಳಿ ಕಂಡು ಬಂತು.

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕ್ಷಯ ರೋಗ ಪೀಡಿತರನ್ನು ತಾರತಮ್ಯದಿಂದ ಕಾಣದೆ ಅವರಲ್ಲಿರುವ ರೋಗ ಗುಣಪಡಿಸಲು ಪ್ರಯತ್ನಿಸಬೇಕು. ರೋಗ ದೂರವಾಗಬೇಕೇ ಹೊರತು ರೋಗಿಯಲ್ಲ. ಹಾಗಾಗಿ ನಿರ್ಗತಿಕರು, ಬಡವರ ಬದುಕಿನಲ್ಲಿ ಭರವಸೆ ಮೂಡಿಸುವ ಕಾರ್ಯ ಪ್ರತಿಷ್ಠಾನವು ಇಂಥ ಜನಮುಖಿ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮರಾವ ಟಿ.ಟಿ. ಮಾತನಾಡಿ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿಕಾರ್ಯಕ್ರಮಗಳು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಜತೆಗೆ ಸರ್ವ ಸಮಾಜದ ಜನರ ಮನ ಮಿಡಿಯುವ ಇಂಥ ಸಾಮಾಜಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾದಿಕಾರಿ ಡಾ.ವಿವೇಕಾನಂದ ರೆಡ್ಡಿ ಮಾತನಾಡಿ, ಕ್ಷಯ ರೋಗದ ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ. ಕ್ಷಯ ರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕೆಂದರು.

ಪಶು ಸಂಗೋಪನಾ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ನಿಜಲಿಂಗಪ್ಪ ಕೊರಳ್ಳಿ, ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಅಣ್ಣಾರಾಯ ಹಾಬಾಳಕರ್, ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ, ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಪಿಲ್ಲೂ ಹೋಮಿ ಇರಾನಿ ಮಹಿಳಾ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಕವಿತಾ ಪಾಟೀಲ, ಪ್ರಮುಖರಾದ ಶರಣಬಸವ ಜಂಗಿನಮಠ, ಕಲ್ಯಾಣಕುಮಾರ ಶೀಲವಂತ, ಮಹೇಶ ರಂಗದಾಳ, ಶಿವರಾಜ್ ಕಾಳಗಿ ಮಹಾಗಾಂವ, ರವೀಂದ್ರಕುಮಾರ ಭಂಟನಳ್ಳಿ, ಶಿವಲಿಂಗಪ್ಪ ಟೆಂಗಳಿ, ಹಣಮಂತರಾಯ ಅಟ್ಟೂರ, ಶರಣರಾಜ್ ಛಪ್ಪರಬಂದಿ, ಕವಿತಾ ಕಾವಳೆ, ಶ್ರೀಕಾಂತ ಪಾಟೀಲ ತಿಳಗುಳ, ಪ್ರಭವ ಪಟ್ಟಣಕರ್, ಮೌನೇಶಕುಮಾರ ವಿಶ್ವಕರ್ಮ, ಹಣಮಂತ ದಂಡೋತಿ, ಲಕ್ಷ್ಮಣ ಇಂಗಳಗಿ, ಮಂಜುನಾಥ ಕಂಬಳಿಮಠ, ಶಿವಶರಣ ಕುಸನೂರ, ಶಿವಾನಂದ ಮಠಪತಿ, ಬಸಯ್ಯಾ ಗಣಾಚಾರಿ, ವಿಶಾಲಾಕ್ಷಿ ದೇಸಾಯಿ, ಮಾಲಾ ಕಣ್ಣಿ, ಮಾಲಾ ದಣ್ನೂರ, ಜ್ಯೋತಿ ಕೋಟನೂರ, ಬಾಬಾ ಫಕ್ರುದ್ದೀನ್, ಅಶೋಕ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here